ವೃದ್ದೆಯಲ್ಲಿ ಕೊರೊನಾ ದೃಢ, ಸುರತ್ಕಲ್ ಕಂಟೈನ್ ಮೆಂಟ್ ಜೋನ್ – ಸಿಂಧೂ ಬಿ ರೂಪೇಶ್….
ಮಂಗಳೂರು: ಸುರತ್ಕಲ್ ಗ್ರಾಮದ 68 ವರ್ಷದ ಮಹಿಳೆಗೆ ಕೊರೊನಾ ಸೋಂಕು ಇರುವುದು ಖಚಿತವಾಗಿರುವುದರಿಂದ ಸುರತ್ಕಲ್ ಪ್ರದೇಶವನ್ನು ಕಂಟೈನ್ ಮೆಂಟ್ ಜೋನ್ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.
ಸುರತ್ಕಲ್ ಮೂಲದ ಮಹಿಳೆಗೆ ಯಾವ ಮೂಲದಿಂದ ಸೋಂಕು ಹರಡಿದೆ ಎಂದು ಇನ್ನು ಖಚಿತವಾಗಿಲ್ಲ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ತೀವ್ರ ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಿದಾದ ಸೋಂಕು ಖಚಿತವಾಗಿದೆ.
ಜಿಲ್ಲಾಧಿಕಾರಿ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದುಬೈನಿಂದ ಆಗಮಿಸಿದ ಪ್ರಯಾಣಿಕರ ಪೈಕಿ 15 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಪೈಕಿ 45 ವರ್ಷದ ಗಂಡ, 33 ವರ್ಷದ ಹೆಂಡತಿ 6 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂರು ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ಈ ವಿಮಾನದಲ್ಲಿ 38 ಮಂದಿ ಗರ್ಭಿಣಿಯರು ಬಂದಿದ್ದು ಇವರಲ್ಲಿ ಸೋಂಕು ಕಂಡುಬಂದಿಲ್ಲ. ಅದರೂ ಮುನ್ನೆಚ್ಚರಿಕಾ ಕ್ರಮವಾಗಿ ನೆಗೆಟಿವ್ ಬಂದ ಎಲ್ಲಾ ಪ್ರಯಾಣಿಕರ 12ನೇ ದಿನದಂದು ಸ್ವಾಬ್ ಟೆಸ್ಟ್ ಮಾಡಲಿದ್ದೇವೆ ಎಂದು ಹೇಳಿದ್ದಾರೆ.