ಶುಕ್ರವಾರ – ದ.ಕ 33 ,ಉಡುಪಿ 9 ಹಾಗೂ ರಾಜ್ಯದಲ್ಲಿ 445 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ…
ಮಂಗಳೂರು: ಇಂದು(ಶುಕ್ರವಾರ) ದ.ಕ ಜಿಲ್ಲೆಯಲ್ಲಿ 33 ,ಉಡುಪಿ ಜಿಲ್ಲೆಯಲ್ಲಿ 9 ಹಾಗೂ ರಾಜ್ಯದಲ್ಲಿ 445 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ದ.ಕ ಜಿಲ್ಲೆಯ ಸೋಂಕಿತರ ಪೈಕಿ 6 ಮಂದಿ ಕತಾರ್ ಹಾಗೂ ನಾಲ್ವರು ದಮಾಮ್ ನಿಂದ ಮರಳಿದವರಾಗಿದ್ದಾರೆ. ಪತ್ತೆಯಾದ ಪ್ರಕರಣಗಳ ಪೈಕಿ ನಾಲ್ಕು ILI ಪ್ರಕರಣಗಳಾಗಿದ್ದು, 2 SAARI ಪ್ರಕರಣವೆಂದು ಗುರುತಿಸಲಾಗಿದೆ. ಉಡುಪಿ ಪ್ರಯಾಣ ಹಿಸ್ಟರಿ ಹೊಂದಿರುವ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ. ಟ್ರಾವೆಲ್ ಹಿಸ್ಟರಿ ಇಲ್ಲದ ಒಂದು ಪ್ರಕರಣ ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ ಹೆಚ್ಚಿನ ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಸೋಂಕು ಕಂಡುಬಂದ ಬಹುತೇಕರಲ್ಲಿ ಯಾವುದೇ ಸೋಂಕು ಲಕ್ಷಣಗಳು ಕಂಡು ಬಂದಿಲ್ಲ.
ರಾಜ್ಯದಲ್ಲಿ ಪತ್ತೆಯಾದ 445 ಸೋಂಕಿತರ ಪೈಕಿ 21 ಮಂದಿ ಅಂತರಾಷ್ಟ್ರೀಯ ಪ್ರಯಾಣ ಹಿನ್ನೆಲೆ ಹಾಗೂ 65 ಮಂದಿ ಹೊರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರು ನಗರದಲ್ಲಿ 144, ಬಳ್ಳಾರಿಯಲ್ಲಿ 47, ಕಲಬುರಗಿಯಲ್ಲಿ 42, ಕೊಪ್ಪಳದಲ್ಲಿ 36, ದಕ್ಷಿಣಕನ್ನಡದಲ್ಲಿ 33, ಧಾರವಾಡದಲ್ಲಿ 30, ರಾಯಚೂರಿನಲ್ಲಿ 14, ಗದಗದಲ್ಲಿ 12, ಚಾಮರಾಜನಗರದಲ್ಲಿ 11, ಉಡುಪಿಯಲ್ಲಿ 9, ಯಾದಗಿರಿಯಲ್ಲಿ 7, ಮಂಡ್ಯ, ಉತ್ತರಕನ್ನಡ, ಬಾಗಲಕೋಟೆ, ಶಿವಮೊಗ್ಗ, ಕೋಲಾರದಲ್ಲಿ ತಲಾ 6, ಮೈಸೂರಿನಲ್ಲಿ 5, ಚಿಕ್ಕಮಗಳೂರು, ಕೊಡುಗಿನಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರ, ಹಾಸನದಲ್ಲಿ ತಲಾ3, ವಿಜಯಪುರ, ತುಮಕೂರು, ಹಾವೇರಿಯಲ್ಲಿ ತಲಾ 2, ಬೀದರ್,ಬೆಳಗಾವಿ, ದಾವಣಗೆರೆ, ರಾಮನಗರ, ಚಿತ್ರದುರ್ಗದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.