ಸುರತ್ಕಲ್ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಮನೆ ಸೀಲ್ ಡೌನ್…

ಮಂಗಳೂರು: ಸುರತ್ಕಲ್ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಅವರ ಪುತ್ರನಿಗೆ ಕೊರೊನ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿರುವ ಅವರ ನಿವಾಸವನ್ನು ಇಂದು ಸೀಲ್ ಡೌನ್ ಮಾಡಿದೆ.
ಬೆಂಗಳೂರಿನಲ್ಲಿರುವ ಅವರ ಪುತ್ರನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆದರೆ, ಮಂಗಳೂರಿನಲ್ಲಿರುವ ಮಾಜಿ ಶಾಸಕ ಹಾಗೂ ಅವರ ಪತ್ನಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ನೆಗೆಟಿವ್ ವರದಿ ಲಭ್ಯವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರಿನಲ್ಲಿರುವ ಅವರ ಮನೆ ಸೀಲ್ ಡೌನ್ ಮಾಡಿ ಆದೇಶ ನೀಡಲಾಗಿದೆ. ಸದ್ಯ ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರ ಪುತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.