ಗುರುವಾರ – ದ.ಕ 29 ,ಉಡುಪಿ 14 ಹಾಗೂ ರಾಜ್ಯದಲ್ಲಿ 442 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ…
ಮಂಗಳೂರು: ಇಂದು(ಗುರುವಾರ) ದ.ಕ ಜಿಲ್ಲೆಯಲ್ಲಿ 29 ,ಉಡುಪಿ ಜಿಲ್ಲೆಯಲ್ಲಿ 14 ಹಾಗೂ ರಾಜ್ಯದಲ್ಲಿ 442 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ದ.ಕ ಜಿಲ್ಲೆಯ ಸೋಂಕಿತರ ಪೈಕಿ 19 ಮಂದಿ ವಿದೇಶದಿಂದ ಆಗಮಿಸಿದವರಾಗಿದ್ದಾರೆ. ಸೌದಿ ಅರೇಬಿಯಾ, ಮಸ್ಕತ್, ಕತಾರ್, ಶಾರ್ಜಾದಿಂದ ಆಗಮಿಸಿದವರಾಗಿದ್ದಾರೆ. ಒಬ್ಬರಲ್ಲಿ ಐ ಎಲ್ ಐ, ಇಬ್ಬರಲ್ಲಿ ಎಸ್ ಎ ಎ ಆರ್ ಐ ಪ್ರಕರಣವಾದರೆ, ಮತ್ತೊಬ್ಬರು ಮುಂಬೈನಿಂದ ಆಗಮಿಸಿದವರಾಗಿದ್ದಾರೆ.ಎಲ್ಲಾ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ 43 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು 14 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 10 ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದು, ಉಳಿದ ನಾಲ್ವರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಇನ್ನು ರಾಜ್ಯದಲ್ಲಿ ಇಂದು 442 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಮತ್ತು 4 ಜನ ಸೋಂಕಿತರು ಮೃತಪಟ್ಟಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 113 , ಕಲಬುರಗಿ 35, ರಾಮನಗರ 33, ಬಳ್ಳಾರಿ 26, ಧಾರವಾಡ 26, ಮೈಸೂರು 22, ಬಾಗಲಕೋಟೆ 18, ಕೊಡಗು 18 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಇಂದು ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಎಂಟು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.