ಮ್ಯಾನ್ ಹೋಲ್ ಗೆ ಇಳಿದು ಬ್ಲಾಕ್ ಸರಿಪಡಿಸಿದ ಕಾರ್ಪೊರೇಟರ್…
ಮಂಗಳೂರು : ಚರಂಡಿ ಬ್ಲಾಕ್ ಆಗಿ ತಕ್ಷಣವೇ ರಿಪೇರಿ ಮಾಡಿ ಕೊಡದ ಕಾರಣ ಕದ್ರಿ ಕಂಬಳ ವಾರ್ಡ್ ನ ಕಾರ್ಪೋರೇಟರ್ ಮನೋಹರ ಶೆಟ್ಟಿ ಅವರು ತಾವೇ ಇಳಿದು ಮ್ಯಾನ್ ಹೋಲ್ ಅನ್ನು ಸರಿಪಡಿಸಿದ ಘಟನೆ ನಡೆದಿದೆ.
ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿಗೆ ತಡೆಯುಂಟಾದಾಗ, ಸಮಸ್ಯೆ ಏನೆಂಬುದು ತಿಳಿಯಲು ಪಕ್ಕದಲ್ಲಿರುವ ಮ್ಯಾನ್ ಹೋಲ್ ಚೇಂಬರ್ ನಲ್ಲಿಳಿದು ಸಮಸ್ಯೆ ತಿಳಿಯಲು ನಿರಾಕರಿಸಿದಾಗ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿಯವರು ತಾನೇ ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ತಿಳಿದು ಕಾರ್ಮಿಕರಿಗೆ ವಿವರಿಸಿದ ಘಟನೆ ನಡೆದಿದೆ.ಇಷ್ಟಾದ ಮೇಲೂ ತೊಡಕನ್ನು ಸರಿಪಡಿಸಲು ಕಾರ್ಮಿಕರು ಚೇಂಬರ್ ಒಳಗಡೆ ಇಳಿಯದಿದ್ದಾಗ ಕೂಡಲೇ ಕಾರ್ಪೊರೇಟರ್ ಮನೆಯಿಂದ ಒಂದು ಜೊತೆ ಬದಲಿ ಬಟ್ಟೆಯನ್ನು ತರಿಸಿ, ಧರಿಸಿ ಚೇಂಬರ್ ಒಳಗಡೆ ಇಳಿದು ತಾನೇ ಕೆಲಸ ಮಾಡಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.