ಮಂಗಳೂರು – ಕೇಂದ್ರದ ಮಾಜಿ ಸಚಿವರೊಬ್ಬರಿಗೆ ಕೋವಿಡ್ ಸೋಂಕು ದೃಢ???…

ಮಂಗಳೂರು: ಜಿಲ್ಲೆಯ ಮಾಜಿ ಕೇಂದ್ರ ಸಚಿವರೊಬ್ಬರಿಗೆ ಮತ್ತು ಅವರ ಪತ್ನಿಗೂ ಕೊರೊನ ಸೋಂಕು ತಾಗಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಜಿ ಸಚಿವರಿಗೆ ಕೋವಿಡ್ -19 ಸೋಂಕು ದೃಢವಾಗಿದ್ದರೂ, ಅವರಿಗೆ ಸೋಂಕು ಸಂಬಂಧಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಅವರು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೆ ಇರುವುದು ಹಾಗೂ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇದ್ದರೂ ಸೋಂಕು ಪತ್ತೆಯಾಗಿದೆ. ಅವರ ಮನೆಯ ಕೆಲಸದಾಕೆಯ ಕಾರಣದಿಂದ ಸೋಂಕು ತಾಗಿದೆ ಎನ್ನಲಾಗಿದೆ. ಸದ್ಯ ಮಾಜಿ ಸಚಿವರು ಮತ್ತು ಅವರ ಪತ್ನಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.