ಸೆ.2 – ಡಾ.ಮಹೇಶ್‍ಪ್ರಸನ್ನ ಅವರ ಜತೆ ಫೋನ್ -ಇನ್ ಕಾರ್ಯಕ್ರಮ…

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಅವರ ಜತೆ ನೇರ ಫೋನ್ -ಇನ್ ಕಾರ್ಯಕ್ರಮವು ಸೆ.2 ರಂದು ಸಂಜೆ ಗಂಟೆ 5 ರಿಂದ 6 ರವರೆಗೆ ರೇಡಿಯೋ ಪಾಂಚಜನ್ಯ 90.8 ಎಫ್ ಎಂ ಸಮುದಾಯ ಬಾನುಲಿ ಕೇಂದ್ರದಿಂದ ಪ್ರಸಾರವಾಗಲಿದೆ.
ಕಾಲೇಜಿನ ಸವಲತ್ತುಗಳ ಬಗ್ಗೆ, ದಾಖಲಾತಿಯ ಬಗ್ಗೆ, ಸಿಇಟಿಗೆ ದಾಖಲೆಗಳನ್ನು ಅಪ್ ಲೋಡ್ ಮಾಡುವ ಬಗ್ಗೆ, ಮುಂದೆ ನಡೆಯುವ ಪಾಠ ಪ್ರವಚನಗಳ ಬಗ್ಗೆ, ಕಾಲೇಜಿನ ಮುಂದಿನ ಅಭಿವೃದ್ಧಿಯ ಬಗ್ಗೆ ಹೀಗೆ ಕಾಲೇಜು ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 08251-298499. ಈ ಫೋನ್-ಇನ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಾ.ಮಹೇಶ್‍ಪ್ರಸನ್ನ