ಅಯನಾ.ವಿ. ರಮಣ್ ಗೆ ಪಿಯುಸಿ ಪರೀಕ್ಷೆ ಯಲ್ಲಿ ಶೇ. 95 ಅಂಕ…
ಮೂಡುಬಿದಿರೆ: ಕರ್ನಾಟಕ ಸರಕಾರದ ಪಿಯು ಬೋರ್ಡ್ ಮಾರ್ಚ್ – 2020 ರಲ್ಲಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಮೂಡುಬಿದಿರೆಯ ಅಯಾನಾ. ವಿ.ರಮಣ್ ಶೇಕಡಾ 95 ಅಂಕ ಗಳಿಸಿ(570 ಅಂಕಗಳು) ಡಿಸ್ಟಿಂಕ್ಷನ್ ನೊಂದಿಗೆ
ತೇರ್ಗಡೆಯಾಗಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸಾಂಸ್ಕೃತಿಕ ದತ್ತು ಸ್ವೀಕಾರದ ವಿದ್ಯಾರ್ಥಿಯಾಗಿರುವ ಅಯನಾ ಜಿಲ್ಲೆಗೆ 9ನೆ ಸ್ಥಾನ ಮತ್ತು ತರಗತಿಗೆ 2ನೆ ಸ್ಥಾನ ಗಳಿಸಿದ ಸಾಧನೆ ಮಾಡಿದ್ದಾರೆ.
ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆ,ರೋಟರಿ ಸ್ಕೂಲ್ ಗಳ ಹಿರಿಯ ವಿದ್ಯಾರ್ಥಿಯಾಗಿರುವ ಅಯನಾ.ವಿ.ರಮಣ್
ಉಪನ್ಯಾಸಕಿ ಡಾ|| ಮುಕಾಂಬಿಕ .ಜಿ. ಎಸ್. ಹಾಗೂ ಕಲಾವಿದ ಕೆ. ವಿ. ರಮಣ್ ದಂಪತಿಯ ಪುತ್ರಿ.
ಭರತನಾಟ್ಯದ ಬಹುಮುಖ ಪ್ರತಿಭೆ :
ತನ್ನ 4ನೆ ವಯಸ್ಸಿನಿಂದ ಮನೆ ಮನೆಗೆ ಭರತನಾಟ್ಯ , ನಾಟ್ಯಾಯನ ಮುಂತಾದ ವಿಶಿಷ್ಟ ಪರಿಕಲ್ಪನೆಗಳ ಮೂಲಕ ದೇಶ – ವಿದೇಶಗಳಲ್ಲಿ ಪ್ರದರ್ಶನ ನೀಡಿ ಮನೆಮಾತಾಗಿದ್ದಾರೆ. ದ.ಕ. ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಭರತನಾಟ್ಯಕ್ಕಾಗಿ ಕೇಂದ್ರ – ರಾಜ್ಯಗಳ ಸ್ಕಾಲರ್ ಶಿಪ್ ಪಡೆಯುತ್ತಿದ್ದಾರೆ.
ಬೆಂಗಳೂರಿನ ವಿ| ಸತ್ಯನಾಾಯಣರಾಜು ಮತ್ತು ವಿ| ಶಾರದಾ ಮಣಿ ಶೇಖರ್ ಶಿಷ್ಯೆಯಾಗಿದ್ದು ಭರತನಾಟ್ಯದ ವಿದ್ವತ್ ಪದವಿಗೆ ತಯಾರಿ ನಡೆಸಿದ್ದಾರೆ. ಹಿಂದೂಸ್ತಾನಿ ಸಂಗೀತದಲ್ಲಿ ವಿಶಾರದ ಪದವಿಗಾಗಿ ಪಂ|| ರವಿಕಿರಣ್ ಮಣಿಪಾಲ್ ಅವರಲ್ಲಿ ತರಬೇತಿ ಪಡಯುತ್ತಿದ್ದಾರೆ.