ಸುಳ್ಯ ರೋಟರಿ,ಇನ್ನರ್‍ವ್ಹೀಲ್ ಕ್ಲಬ್ ವತಿಯಿಂದ ರಾಧಾಕೃಷ್ಣ ಸ್ಪರ್ಧೆ…..

ಸುಳ್ಯ: ರೋಟರಿ ಕ್ಲಬ್ ಸುಳ್ಯ, ಇನ್ನರ್‍ವೀಲ್ ಕ್ಲಬ್, ಸುಳ್ಯ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ 1ರಿಂದ 6ನೇ ವಯಸ್ಸಿನ ಮಕ್ಕಳಿಗೆ ರಾಧಾಕೃಷ್ಣ ಛದ್ಮವೇಷ ಸ್ಪರ್ಧೆಯನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ರೊ.ಮಧುಸೂದನ್ ಉದ್ಘಾಟಿಸಿದರು. ಒಟ್ಟು 68 ಸ್ಪರ್ಧಾಳುಗಳು ಭಾಗವಹಿಸಿದರು. 1ರಿಂದ 3ನೇ ವಯಸ್ಸಿನ ವಿಭಾಗದಲ್ಲಿ ಪ್ರಥಮ – ಮಾಸ್ಟರ್ ಅಮೋಘ ದ್ವಿತೀಯ ಸ್ಥಾನವನ್ನು ಸಾಯ ಕುತ್ತಮೊಟ್ಟೆ, 4ರಿಂದ 6ನೇ ವಯಸ್ಸಿನ ವಿಭಾಗದಲ್ಲಿ ಪ್ರಥಮ-ಮಿಥಾಲಿ, ದ್ವಿತೀಯ ಸ್ಥಾನವನ್ನು- ಅಥರ್ವ ಪಡೆದರು.
ಈ ಸಂದರ್ಭ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷರಾದ ರೊ.ಡಾ. ಪುರುಷೋತ್ತಮ ಕೆ.ಜಿ,ಇನ್ನರ್‍ವೀಲ್ ಅಧ್ಯಕ್ಷೆ ರೊ.ಡಾ.ಹರ್ಷಿತಾ ಪುರುಷೋತ್ತಮ ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷರಾದ ರೊ. ಭಾನುಪ್ರಕಾಶ, ವಲಯ 5ರ ಅಸಿಸ್ಟೆಂಟ್ ಗವರ್ನರ್ ರೊ. ಡಾ. ಕೇಶವ ಪಿ.ಕೆ, ನಿಯೋಜಿತ ರೋಟರಿ ಅಧ್ಯಕ್ಷರಾದ ರೊ. ಡಾ. ಗುರುರಾಜ ವೈಲಾಯ, ರೊ.ಗುರುವಿಕ್ರಮ ಪ್ರಸಾದ್, ಶ್ರೀಮತಿ ಜಯಮಣಿ ಮಾದವ ಹಾಗು ಎಲ್ಲಾ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀದೇವಿ ನಾಗರಾಜ್, ಪೂಜಾ ಸಂತೋಷ್, ಹಾಗು ಶ್ರೀಮತಿ ಜಯಲಕ್ಷ್ಮಿ ನಿರೂಪಿಸಿದರು. ತೀರ್ಪುಗಾರರಾಗಿ ರೊ. ಲತಾಮಧುಸೂದನ್, ಡಾ. ಕವಿತಾ ದೇವಿಪ್ರಸಾದ್, ಶ್ರೀಮತಿ ಕೌಸಲ್ಯಾ ಸತೀಶ್, ರೊ. ಯೋಗಿತಾ ಗೋಪಿನಾಥ್ ಹಾಗೂ ಶ್ರೀಮತಿ ಝಾನ್ಸಿ ಸಹಕರಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button