KCF ಒಮಾನ್ ವತಿಯಿಂದ ಅಲ್ ಮುಬಾಶಿರ ಗ್ರ್ಯಾಂಡ್ ಫ್ಯಾಮಿಲಿ ಮೀಟ್…

ಬರ್ಕ: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ವತಿಯಿಂದ KCF ‘ಅಲ್ ಮುಬಾಶಿರ ಗ್ರ್ಯಾಂಡ್ ಫ್ಯಾಮಿಲಿ ಮೀಟ್’ ಬರ್ಕಾದ ಅಲ್ ರಿಯಾಮ್ ಫಾರ್ಮ್ ಹೌಸ್ ನಲ್ಲಿ ಫೆ. 17 ರಂದು ನಡೆಯಿತು.
ಕಾರ್ಯಕ್ರಮವು ಬೆಳಿಗ್ಗೆ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನೊಂದಿಗೆ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು KCF ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿಯವರು ವಹಿಸಿದ್ದರು.ಸೈಯಿದ್ ಆಬಿದ್ ಅಲ್ ಹೈದ್ರೋಸಿ ದುಆಕ್ಕೆ ನೇತೃತ್ವ ನೀಡಿದರು.
ಅಶ್ರಫ್ ಕುತ್ತಾರ್ ಹಾಗೂ ಆರಿಫ್ ಮದಕ ಇವರಿಂದ ಸ್ವಾಗತ ಹಾಡಿನ ಮೂಲಕ ಅಲ್ಲಿ ಸೇರಿದವರನ್ನು ಸ್ವಾಗತಿಸಲಾಯಿತು. ನಂತರ ಶಫೀಕ್ ಮಾರ್ನಬೈಲು ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಹಾಗೂ KCF PATH OF GROWTH ಈ ವಿಷಯದಲ್ಲಿ ಚರ್ಚಾ ಗೋಷ್ಠಿ ನಡೆಯಿತು. ಬೆಳಗ್ಗಿನಿಂದ ನಡೆದ ಕಾರ್ಯಕ್ರಮದಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್, ಕೆಸಿಎಫ್ ಫೌಂಡೇಶನ್ ಡೇ, ನಮ್ಮನ್ನಗಲಿದವರ ಅನುಸ್ಮರಣಾ ಕಾರ್ಯಕ್ರಮ, ಕೆಸಿಎಫ್ ನಲ್ಲೂ ವಿವಿಧ ರಂಗದಲ್ಲೂ ಸಾಧನೆಗೈದ ಹಾಗೂ 30 ವರ್ಷಕ್ಕೊ ಹೆಚ್ಚು ಕಾಲ ಅನಿವಾಸಿ ಜೀವನವನ್ನು ಸಾಗಿಸುತ್ತಿರುವವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಬದರ್ ಅಲ್ ಸಮಾ ಆಸ್ಪತ್ರೆ ಸಹಯೋಗ ದೊಂದಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ಡಾ. ಅಬ್ದುಲ್ ರಝಾಕ್ ಕಾಪು (senior cardiologist MOH oman ) ಇವರಿಂದ ಆರೋಗ್ಯ ಮಾಹಿತಿ ತರಬೇತಿ, ಸಲೀಮ್ ಅಲ್ತಾಫ್ ಸುಳ್ಯ(National Director BNI Oman) ಇವರಿಂದ ಸೆಲ್ಫ್ ಬಿಸಿನೆಸ್ ಟ್ರೈನಿಂಗ್, KCF ಉತ್ತರ ಕರ್ನಾಟಕದಲ್ಲಿ ನಡೆಸಿದ ಹಾಗೂ ನಡೆಯುತ್ತಿರುವ ಯೋಜನೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ಕಾರ್ಯಗಾರ, ಕೆಸಿಎಫ್ ಒಮಾನ್ ಇದರ ಅಧೀನದಲ್ಲಿ ಮತ್ತೊಂದು ಗರಿಯಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮಸೀದಿ ಮತ್ತು ಮದ್ರಸ ಕಟ್ಟಡ ಕಾಮಗಾರಿಗೆ ಅಧಿಕೃತ ಚಾಲನೆ, ಕೆಸಿಎಫ್ ಒಮಾನ್ ದಶಮಾನೋತ್ಸವದ ಪ್ರಯುಕ್ತ ಹೊರತರುವ ವಿಶೇಷಾಂಕದ ಮುಖಪುಟ ಬಿಡುಗಡೆ,KCF ಅಂತರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷ ರೈಸ್ಕೊ ಅಬೂಬಕ್ಕರ್ ಹಾಜಿಯವರ ಮಗಳು ಫಾತಿಮಾ ಹನಾನ
ಭಾಷಾಂತರ ಮಾಡಿದ Prophet Muhammed A compendious Anecdote ಎಂಬ ಇಂಗ್ಲೀಷ್ ಪುಸ್ತಕ ಬಿಡುಗಡೆ ಹಾಗೂ ಕಾರ್ಯಕ್ರಮ ದಲ್ಲಿ ಸೇರಿದ ಜನರಿಗೆ ಆಟೋಟ ಸ್ಪರ್ಧೆಗಳು, ಕ್ವಿಝ್, ದಫ್ ಪ್ರದರ್ಶನ, ಮಹಿಳೆಯರಿಗೆ ಮಕ್ಕಳಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಹಾಗೂ ವಿವಿಧ ರೀತಿಯ ತಿಂಡಿ ತಿನಿಸುಗಳ ಮಳಿಗೆ, ಬೆಳಿಗಿನಿಂದ ಕಾರ್ಯಕ್ರಮ ಮುಗಿಯುವವರೆಗೂ ಊಟ ಉಪಹಾರ ವನ್ನು ನೀಡಲಾಯಿತು. ಹಮೀದ್ ಕಂದಕ್ ರುವಿ ಅವರು ಕೆಸಿಎಫ್ ಗ್ರಾಂಡ್ ಫ್ಯಾಮಿಲಿ ಮೀಟ್ ಉಚಿತ ಕೂಪನ್ ಡ್ರಾ ವಿಜೇತರಾದರು.

ಕಾರ್ಯಕ್ರಮದಲ್ಲಿ ಆಬಿದ್ ಪಾಷ ಬಾಳೆಹೊನ್ನೂರು, ಜನಾಬ್ ಇಕ್ಬಾಲ್ ಬೊಳ್ಮಾರ್ ಬರ್ಕ, ಸ್ವಾದಿಕ್ ಹಾಜಿ ಸುಳ್ಯ, ಜನಾಬ್ ಆರಿಫ್ ಕೋಡಿ, ಇಬ್ರಾಹೀಂ ಹಾಜಿ ಅತ್ರಾಡಿ, ಅಬ್ದುಲ್ ಸಲಾಂ ಸಖಾಫಿ ಅರಿಕ್ಕಾಡಿ, ಉಬೈದುಲ್ಲಾ ಸಖಾಫಿ ಮಿತ್ತೂರು, ಸಲೀಮ್ ಮಿಸ್ಬಾಹಿ ಕನ್ಯಾನ, ಇಂಡಿಗೋ ಒಮಾನ್ ವ್ಯವಸ್ಥಾಪಕ ಪ್ರೇಮ್ ಕೊಲಾಸೊ, ಒಮಾನ್ DKSC ಅಧ್ಯಕ್ಷರಾದ ಮೋನಬ್ಬ ಅಬ್ದುರ್ರಹ್ಮಾನ್ ಹಾಜಿ , Event Sponser ONEIC ಗ್ರೂಪ್ ಇದರ ಸದಸ್ಯರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ದಲ್ಲಿ ಕಲಂದರ್ ಬಾಷ ತೀರ್ಥಹಳ್ಳಿ, ಝುಬೈರ್ ಸಅದಿ ಪಾಟ್ರಕೋಡಿ, ಇರ್ಫಾನ್ ಕೂರ್ನಡ್ಕ, ಇಕ್ಬಾಲ್ ಎರ್ಮಾಳ್, ಸಂಶುದ್ದೀನ್ ಪಾಲ್ತಡ್ಕ,ಅಬ್ದುಲ್ ಸಫ್ವಾನ್ ಒಡಿಯೂರು, ಶಫೀಕ್ ಎಲಿಮಲೆ ಸುಳ್ಯ, ಮುಝಮ್ಮಿಲ್ ಅಳಕೆಮಜಲು, ನವಾಝ್ ಮಣಿಪುರ, ಅಬ್ಬಾಸ್ ಮರಕಡ ಸುಳ್ಯ ,ಅಬ್ದುಲ್ ಲತೀಫ್ ಮಂಜೇಶ್ವರ , ಜಸೀಮ್ ಅಹಮದ್, ಫಾರೂಕ್ ಕುಕ್ಕಾಜೆ, ಹುಸೈನ್ ತೀರ್ಥ ಹಳ್ಳಿ, ಅಬ್ದುಲ್ ಲತೀಫ್ ಸುಳ್ಯ ಇವರು ಸಹಕರಿಸಿದರು. ಸ್ವಾಗತ ಸಮಿತಿ ಚೇರ್ಮೇನ್ ಸಿದ್ದೀಕ್ ಮಾಂಬ್ಳಿ ಸುಳ್ಯ ಸ್ವಾಗತಿಸಿ ಕನ್ವೀನರ್ ಹಂಝ ಹಾಜಿ ಕನ್ನಂಗಾರ್ ವಂಧಿಸಿದರು.ಕಲಂದರ್ ಬಾವ ಪರಪ್ಪು, ಮತ್ತು ಶಾಕಿರ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದುದ್ದಕ್ಕೂ KCF ಒಮಾನ್ iTEAM ತಂಡವು ಸ್ವಯಂ ಸೇವಕರಾಗಿ ಸಹಕರಿಸಿದರು.

whatsapp image 2023 02 26 at 4.49.16 pm
whatsapp image 2023 02 26 at 4.49.17 pm
whatsapp image 2023 02 26 at 4.49.13 pm
whatsapp image 2023 02 26 at 4.49.12 pm
Sponsors

Related Articles

Back to top button