ಎಸ್.ಕೆ.ಎಸ್.ಬಿ.ವಿ, ನುಸ್ರತುಲ್ ಇಸ್ಲಾಂ ಮದರಸ ಅರಂತೋಡಿನಲ್ಲಿ ಸಮಸ್ತದ 100 ನೇ ಸಂಸ್ಥಾಪನಾ ದಿನಾಚರಣೆ…

ಸುಳ್ಯ: ಎಸ್.ಕೆ.ಎಸ್.ಬಿ.ವಿ, ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಹಾಗೂ ಎಸ್.ಕೆ.ಎಸ್.ಎಸ್.ಎಫ್ ಶಾಖೆ ಅರಂತೋಡು ಇವುಗಳ ಜಂಟೀ ಆಶ್ರಯದಲ್ಲಿ ಸಮಸ್ತದ 100ನೇ ಸ್ಥಾಪನಾ ದಿನಾಚರಣೆಯನ್ನು ಅರಂತೋಡಿನಲ್ಲಿ ಆಚರಿಸಲಾಯಿತು.
ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು. ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ಸಂದೇಶ ಭಾಷಣವನ್ನು ಮಾಡಿ ಸಮಸ್ತ ಆದರ್ಶ ಶುದ್ಧಿಯೊಂದಿಗೆ ಶತಮಾನ ದತ್ತ ಎಂಬ ಧ್ಯೇಯ ವಾಕ್ಯದೊಂದಿಗೆ ಮುನ್ನಡೆಯುತ್ತಿದ್ದು. ಹಲವಾರು ಮಹನೀಯರ ಕೊಡುಗೆ ಮತ್ತು ತ್ಯಾಗದ ಫಲವಾಗಿ ಇಂದು ಬಹಳ ಎತ್ತರಕ್ಕೆ ಬೆಳೆದು ನಿಂತಿದೆ ಎಂದರು.
ಸದರ್ ಅಶ್ರಫ್ ಮುಸ್ಲಿಯಾರ್ ಅಡ್ಕಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ನಿರ್ದೇಶಕರಾದ ಎ.ಹನೀಫ್, ಸಂಶುದ್ಧೀನ್ ಪೆಲ್ತಡ್ಕ, ಮುಜೀಬ್, ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಎಸ್.ಕೆ.ಎಸ್.ಎಸ್.ಎಫ್ ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ವಿಕಾಯ ಸದಸ್ಯ ತಾಜುದ್ಧೀನ್ ಅರಂತೋಡು ಎಸೋಸಿಯೇಶನ್ ಕಾರ್ಯದರ್ಶಿ ಪಸೀಲು, ಎ.ಉಮ್ಮರ್, ಮುಝಮ್ಮಿಲ್ ಕುಕ್ಕುಂಬಳ, ನವಾಝ್ ಉದಯನಗರ, ಹನೀಫ್ ಕುನ್ನಿಲ್, ಮೊಯಿದು ಕುಟ್ಟಿ, ಎ.ಹಮೀದ್ ಹಾಗೂ ಮದರಸ ವಿದ್ಯಾರ್ಥಿಗಳು ಭಾಗವಹಿಸಿದರು. ಅಮೀರ್ ಕುಕ್ಕುಂಬಳ ಸ್ವಾಗತಿಸಿ ಸಂಶುದ್ಧೀನ್ ಕ್ಯೂರ್ ಕಾರ್ಯಕ್ರಮ ನಿರೂಪಿಸಿದರು.