ಜುಲೈ 23 -ಮರ್ ಹೂಮ್ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50 ನೇ ವರ್ಷದ ಪುಣ್ಯಸ್ಮರಣೆ,ಪ್ರಶಸ್ತಿ ಪ್ರದಾನ ಮತ್ತು 50 ಕಾರ್ಯಕ್ರಮಗಳಿಗೆ ಚಾಲನೆ…

ವಿಧಾನಸಭಾ ಸಭಾಧ್ಯಕ್ಷರಾದ ಯು ಟಿ ಖಾದರ್ ಫರೀದ್ ಅವರಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್…

ಸುಳ್ಯ: ಕಳೆದ ಸುಮಾರು ನೂರು ವರ್ಷಗಳಿಂದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಪೇರಡ್ಕ ಗೂನಡ್ಕ, ಅರಂತೋಡು ಸಹಿತ ಕರ್ನಾಟಕ ಕೇರಳ ಮತ್ತು ಇತರ ವಿವಿಧ ಭಾಗಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕ್ರೀಯಶೀಲರಾಗಿ, ಅವಿಭಕ್ತ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಉಧ್ಯಮಿಯಾಗಿ ಸಮಾಜ ಸೇವಕರಾಗಿ ಅನೇಕ ಮಸೀದಿ ಮತ್ತು ಮದರಸಗಳ ಶಾಲೆಗಳ ವಿವಿಧ ಸಂಘ ಸಂಸ್ಥೆಗಳ ಸ್ಥಾಪಕರಾಗಿ, ಸರಕು ಸಾರಿಗೆ, ಮರದ ವ್ಯಾಪಾರಿಯಾಗಿ, ಕಾಡುತ್ಪತಿ ಮತ್ತು ಮರ ಗುತ್ತಿಗೆದಾರರಾಗಿ, ಮಾದರಿ ತೋಟಗಾರಿಕೆ, ಕೃಷಿಕರಾಗಿ, ಜಮೀನುದಾರರಾಗಿ, ಹಲವರನ್ನು ತಂದು ಊರಿನ ಅಭಿವೃದ್ಧಿಯ ಹರಿಕಾರರಾಗಿ ವಿವಿಧ ಕ್ಷೇತ್ರದ ಪರಿಣಿತರನ್ನ ಈ ಭಾಗಕ್ಕೆ ಕರೆತಂದ ತೆಕ್ಕಿಲ್ ಕುಟುಂಬದ ಹಿರಿಯರು, ಆದರ್ಶ ವ್ಯಕ್ತಿತ್ವದ ಜಾತ್ಯತೀತ ಪರಮತ ಸಹಿಷ್ಣು ಆದರ್ಶ ವ್ಯಕ್ತಿ ಮರ್ ಹೂಮ್ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಕರ್ನಾಟಕ ಸರಕಾರದ ವಿಧಾನಸೌಧದ ಮಾನ್ಯ ಸಭಾಪತಿಗಳಾದ ಯು.ಟಿ ಖಾದರ್ ರವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಪ್ರಧಾನ ಸಮಾರಭವು 23 ಜುಲೈ 2023 ರಂದು ಬೆಳಿಗ್ಗೆ 10 ಘಂಟೆಗೆ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕುಟುಂಬ ಸಮ್ಮಿಲನ, ಸಾಧಕರಿಗೆ ಸನ್ಮಾನ ಮತ್ತು ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು 50 ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಸಮಾರಂಭದಲ್ಲಿ ಕೇರಳ, ಕರ್ನಾಟಕ ರಾಜ್ಯದ ಸಚಿವರುಗಳು ವಿವಿಧ ಧಾರ್ಮಿಕ, ರಾಜಕೀಯ ಸಾಮಾಜಿಕ ಮುಖಂಡರುಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ರವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಪ್ರಧಾನವನ್ನು ಜ| ಅಹಮ್ಮದ್ ದೇವರಕೋವಿಲ್ (ಮಾನ್ಯ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವರು ಕೇರಳ) ರವರು ನೆರವೇರಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಾಧಕ ವಿಧ್ಯಾರ್ಥಿಗಳಿಗೆ ಸನ್ಮಾನವನ್ನು ಶ್ರೀ ಶ್ಯಾಮ್ ಭಟ್ ಮಾಜಿ ಅಧ್ಯಕ್ಷರು ಕರ್ನಾಟಕ ಲೋಕಸಭಾ ಆಯೋಗ ಇವರು ಮಾಡಲಿರುವರು.
ಶಾಸಕಿ ಭಾಗೀರಥಿ ಮುರಳ್ಯ ಭಾಗವಹಿಸಲಿದ್ದು ಅಭಿನಂದನಾ ಭಾಷಣವನ್ನು ಲಯನ್ ಎಂ.ಬಿ ಸದಾಶಿವರವರು ಹಾಗೂ ತೆಕ್ಕಿಲ್ ಮಹಮ್ಮದ್ ಹಾಜಿಯವರ ಅನುಸ್ಮರಣೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಿವ್ರತ್ತ ಪ್ರಾಶುಪಾಲ ಕೆ.ಆರ್ ಗಂಗಾಧರ ಕುರುಂಜಿ ರವರು ಮಾಡಲಿದ್ದಾರೆ.
ಸಭಾಧ್ಯಕ್ಷತೆಯನ್ನು ಟಿ.ಎಂ ಶಹೀದ್ ತೆಕ್ಕಿಲ್ (ಸ್ಥಾಪಕಾಧ್ಯಕ್ಷರು ತೆಕ್ಕಿಲ್ ಗ್ರಾಮೀಣಾಭಿವ್ರದ್ದಿ ಪ್ರತಿಷ್ಠಾನ(ರಿ) ಅರಂತೋಡು) ಇವರು ವಹಿಸಲಿದ್ದು. ಅಲ್ಲದೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ತಿಳಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ತೆಕ್ಕಿಲ್ ಕುಟುಂಬಸ್ಥರ ಒಕ್ಕೂಟದ ಅಧ್ಯಕ್ಷರಾದ ಇಬ್ರಾಹಿಂ ಬಿಯಫ್ ಚೊಕ್ಕಾಡಿ,ಪಟೇಲ್ ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಪಟೇಲ್, ಸಂಪಾಜೆ ಗೂನಡ್ಕ ತೆಕ್ಕಿಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಉನೈಸ್ ಪೆರಾಜೆ, ಸಿದ್ದಿಕ್ ಕೊಕೊ ಮೊದಲಾದವರು ಉಪಸ್ಥಿತರಿದ್ದರು.

ಈ ವರೆಗಿನ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪಡೆದುಕೊಂಡವರ ವಿವರಗಳು:

  1. ಕೇರಳ ಸರಕಾರ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು – ಶಾಫಿ ಮೆಹ್ತಾರ್ – 2014
  2. ಕೇರಳ ರಾಜ್ಯದ ಕೃಷಿ ಸಚಿವರು – ಕೆ.ಪಿ.ಮೋಹನ್ ಕ – 2015
  3. ಡಿ.ಜಿ.ಪಿ – ಬೆಂಗಳೂರು – ಓಂ ಪ್ರಕಾಶ್ ಐ ಪಿ ಎಸ್ – 2016
  4. ಅನಿವಾಸಿ ಉಧ್ಯಮಿ – ರಬೀವುಲ್ಲಾ – 2017
  5. ಜೋಡುಪಾಲ ನೆರೆ ಸಂತ್ರಸ್ತರನ್ನು ರಕ್ಷಿಸಿದ – 16 ಮಂದಿ ಸ್ವಯಂ ಸೇವಕ ಯುವಕರಿಗೆ – 2018
  6. ಗಡಿನಾಡ ಕಾಸರಗೋಡು ಜಿಲ್ಲೆಯ ಮಾಧ್ಯಮಂ ಪತ್ರಿಕೆಯ ಮುಖ್ಯವರಧಿಗಾರ ಹಾಗು ಯುನಿಸೆಫ್ ಪ್ರಸಸ್ತಿ ವಿಜೇತರು – ರವೀಂದ್ರನ್ ರಾವಣೇಶ್ವರನ್- 2019
  7. ಸರಕಾರದ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯರು- ಶ್ರೀ ದಾಮೋದರ ಮಾಸ್ಟರ್ -2020
whatsapp image 2023 07 15 at 2.20.50 pm
whatsapp image 2023 07 15 at 2.16.08 pm
whatsapp image 2023 07 15 at 2.21.17 pm
Sponsors

Related Articles

Back to top button