ಮೆಟ್ಟಿಲು…

ಮೆಟ್ಟಿಲು…

ಯಾವ ಆಸೆಯಿಂದ ನಾನು
ಹುಟ್ಟಿ ಭುವಿಗೆ ಬಂದೆನೋ
ಯಾರ ಸ್ಪೂರ್ತಿಯಿಂದ ನಾನು
ಹೀಗೆ ಬೆಳೆದು ನಿಂತೆನೋ

ಬದುಕು ತುಂಬ ನೋವು ನಲಿವು
ಇಣುಕಿಯಾಡುತಿದ್ದಿತು
ಸತ್ಯ ಸುಳ್ಳು ವಂಚನೆಗಳು
ಮನವ ಘಾಸಿಗೊಳಿಸಿತು

ಕ್ಷಣ ಕ್ಷಣಕೂ ನನ್ನ ರೂಪ
ಬೇರೆಯಾಗುತಿದ್ದಿತು
ನನ್ನನಾನೆ ನೋಡುವುದಕೆ
ಭಯವು ಮೂಡುತ್ತಿದ್ದಿತು

ಏನೊ ಮಾಡಿ ಹೇಗೊ ಬದುಕಿ
ಹತ್ತುತಿರುವೆ ಮೆಟ್ಟಿಲು
ಅಮಲು ಘಮಲು ತುಮುಲ ಮೀರಿ
ತಲುಪ ಬೇಕು ಗುರಿಯನು

ರಚನೆ: ಡಾ. ವೀಣಾ ಎನ್ ,ಸುಳ್ಯ

Related Articles

Back to top button