ಒಡಿಯೂರು ಶ್ರೀಗಳಿಂದ ಸುಳ್ಯ ಪ್ರೆಸ್ ಕ್ಲಬ್ ಕಾಮಗಾರಿ ವೀಕ್ಷಣೆ…

ಸುಳ್ಯ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸುಳ್ಯ ಪ್ರೆಸ್ ಕ್ಲಬ್ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಹಲವು ಉಪಯುಕ್ತ ವಾಸ್ತು ಸಲಹೆ, ಆರ್ಥಿಕ ನೆರವು ನೀಡಿದರಲ್ಲದೆ, ಕಟ್ಟಡದ ಕೆಲಸವೂಬೇಗನೆ ಪೂರ್ಣಗೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಕೋಶಾಧಿಕಾರಿ ಯಶ್ವಿತ್ ಕಾಳಮ್ಮನೆ, ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಜೆ ಕೆ ರೈ, ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮನಾಭ ಎಂ, ನಿರ್ದೇಶಕರಾದ ಗಂಗಾಧರ ಮಟ್ಟಿ, ಜಯಪ್ರಕಾಶ್ ಕುಕ್ಕೆಟ್ಟಿ, ದುರ್ಗಾಕುಮಾರ್ ನಾಯರ್ ಕೆರೆ, ಗಿರೀಶ್ ಅಡಪಂಗಾಯ, ಶಿವಪ್ರಸಾದ್ ಆಲೆಟ್ಟಿ, ಹಸೈನಾರ್, ವೆಂಕಟೇಶ್, ಶರೀಫ್ ಜಟ್ಟಿಪಳ್ಳ, ಸತೀಶ್ ಹೊದ್ದೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ವಂದಿಸಿದರು.