ಶ್ರೀ ಲಕ್ಷ್ಮೀ ನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘ – ಆಮಂತ್ರಣ ಪತ್ರಿಕೆ ಬಿಡುಗಡೆ…

ಬಂಟ್ವಾಳ:ಶ್ರೀ ಲಕ್ಷ್ಮೀ ನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಶಾಖೆಯು ಪೆರಾಜೆ ಗ್ರಾಮದ ಗಡಿಯಾರದಲ್ಲಿರುವ ಪಿ.ಕೆ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲ್ಲಿದ್ದು,ಇದರ ಆಮಂತ್ರಣ ಪತ್ರಿಕೆಯು ಇತ್ತೀಚೆಗೆ ಶ್ರೀ ವನದುರ್ಗಾ ದೇವಿ ದೇವಸ್ಥಾನ, ದೇಂತಡ್ಕ-ಪೇರಮುಗೇರು ಇಲ್ಲಿನ ಅಧ್ಯಕ್ಷರಾದ ಶ್ರೀ ಜೆ. ಸುಂದರ ಭಟ್ ಇವರು ಬಿಡುಗಡೆಗೊಳಿಸಿದರು.
ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಕೈಯ್ಯೂರು ನಾರಾಯಣ ಭಟ್, ಊರಿನ ಪ್ರಮುಖರಾದ ಶ್ರೀ ತಿರುಮಲೇಶ್ವರ ಭಟ್ ಪ್ರಗತಿಪರ ಕೃಷಿಕರು, ಶ್ರೀ ಶ್ಯಾಮ್ ಭಟ್ ಜತ್ತನಕೋಡಿ, ಶ್ರೀ ಅನಂತಪ್ರಭು ನೇರಳಕಟ್ಟೆ,ಶ್ರೀ ಕೂಸಪ್ಪ ಪೂಜಾರಿ. ಪಿ ಸಿವಿಲ್ ಇಂಜಿನಿಯರ್,ಮತ್ತು ಸಂಘದ ನಿರ್ದೇಶಕರು ಶ್ರೀ ಸಿ.ಎಚ್. ಸೀತಾರಾಮ ಶೆಟ್ಟಿ,
ಶ್ರೀ ಗಣೇಶ್ ಆಚಾರ್ಯ,ಶ್ರೀ ಕೆ.ಸತೀಶ್ ಕುಕ್ಕಾಜೆಬೈಲು, ಶ್ರೀ ಯೋಗೀಶ್ ಕುಲಾಲ್ ನೋಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.