ಅರಂತೋಡು- ಎಲಿಮಲೆ- ಸುಬ್ರಮಣ್ಯ ರಸ್ತೆ ವೀಕ್ಷಿಸಿದ ಸಚಿವ ಸತೀಶ್ ಜಾರಕಿಹೊಳಿ…

ಸುಳ್ಯ:ಕರ್ನಾಟಕ ಘನ ಸರಕಾರದ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿಯವರು ಬಹು ಬೇಡಿಕೆಯ ಅರಂತೋಡು- ಎಲಿಮಲೆ- ಸುಬ್ರಮಣ್ಯ ರಸ್ತೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಅವರೊಂದಿಗೆ ವೀಕ್ಷಿಸಿ ಅರಂತೋಡಿನಿಂದ ಮರ್ಕoಜದ ಸನಿಹವರೆಗೆ ಸುಮಾರು 8ಕಿ. ಮೀ ರಸ್ತೆಯನ್ನು ಪರಿಶೀಲಿಸಿ ಮೋರಿ, ಚರಂಡಿ ಅಗತ್ಯತೆ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿ ರಸ್ತೆಯನ್ನು ಸಂಪೂರ್ಣ ಅಗಲೀಕರಣಗೊಳಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು.
ರಸ್ತೆಯನ್ನು ವೀಕ್ಷಿಸಿ ಅನುದಾನ ಭರವಸೆ ನೀಡಿದ ಮಾನ್ಯ ಸಚಿವರಿಗೆ ಟಿ. ಎಂ. ಶಾಹಿದ್ ತೆಕ್ಕಿಲ್ ಕೃತಜ್ಞತೆ ಸಲ್ಲಿಸಿ ರಸ್ತೆ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು. ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರು ಮತ್ತು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಎಲಿಮಲೆ, ಕೆ ಡಿ ಪಿ ಸದಸ್ಯ ಅಶ್ರಫ್ ಗುಂಡಿ,ಸಿದ್ದಿಕ್ ಕೊಕೊ, ತಾಜುದ್ದೀನ್ ಅರಂತೋಡು, ಹನೀಫ್ ಮೊಟ್ಟೆಮ್ಗಾರ್ ಮತ್ತಿತರು ಇದ್ದು ಸಚಿವರನ್ನು ಎಲಿಮಲೆ ರಸ್ತೆ ಬಳಿ ಸ್ವಾಗತಿಸಿ ರಸ್ತೆಯ ಅಗತ್ಯತೆ ಬಗ್ಗೆ ವಿವರಿಸಿದರು.