ಪೇರಡ್ಕ- ಗೂನಡ್ಕ ಮೋಹಿದ್ದಿನ್ ಜುಮ ಮಸ್ಜಿದ್ – ಈದುಲ್ ಫಿತರ್ ಹಬ್ಬ…

ಸುಳ್ಯ: ಪೇರಡ್ಕ- ಗೂನಡ್ಕ ಮೋಹಿದ್ದಿನ್ ಜುಮ ಮಸ್ಜಿದ್ ನಲ್ಲಿ ತ್ಯಾಗ ಬಲಿದಾನದ ಈದುಲ್ ಫಿತರ್ ಹಬ್ಬ ಆಚರಿಸಲಾಯಿತು.
ಜಮಾಅತ್ ಖತೀಬರಾದ ರಿಯಾಝ್ ಫೈಝಿ ನೇತೃತ್ವ ವಹಿಸಿ ಮಾತನಾಡಿ ಜಮಾಅತರು ಸರ್ವ ರೀತಿಯಲ್ಲಿ ಮಸೀದಿಯಲ್ಲಿ ಸಹಕರಿಸುವಂತೆ ಕರೆ ನೀಡಿದರು. ನಮಾಝಿನ ಬಳಿಕ ಮಖಾಂ ಝಿಯಾರತ್ ಕೂಟು ಪ್ರಾರ್ಥನೆ ನಡೆಯಿತು.
ತೆಕ್ಕಿಲ್ ಪ್ರತಿಷ್ಠಾನ ಅದ್ಯಕ್ಷರಾದ ಟಿ ಎಂ ಶಹೀದ್, ಜಮಾಅತ್ ಅದ್ಯಕ್ಷರಾದ ಆಲಿ ಹಾಜಿ, ಕಾರ್ಯದರ್ಶಿ ಪಿ ಕೆ ಉಮ್ಮರ್, ಪಂಚಾಯತ್ ಅದ್ಯಕ್ಷರಾದ ಜಿ ಕೆ ಹಮೀದ್, ಪಾಂಡಿ ಅಬ್ಬಾಸ್,ಇಬ್ರಾಹಿಂ ಹಾಜಿ ಕರಾವಳಿ, ಟಿ ಬಿ ಹನೀಫ್, ರಝಾಕ್ ಹಾಜಿ, ಸಾಜಿದ್ ಅಝ್ಹರಿ, ಸಾದುಮಾನ್ ತೆಕ್ಕಿಲ್ ಜುನೈದ್ ತೆಕ್ಕಿಲ್ ಎಂ ಆರ್ ಡಿ ಎ ಪದಾದಿಕಾರಿಗಳು ಇದ್ದರು ಕೊನೆಯಲ್ಲಿ ಎನ್ಕೆ ಎಸ್ ಎಸ್ ಎಪ್ ಪ್ರಧಾನ ಕಾರ್ಯದರ್ಶಿ ಖಾದರ್ ಮೊಟ್ಟೆಂಗಾರ್ ಹಾಗೂ ಮುನೀರ್ ದಾರಿಮಿ ನೇತ್ರತ್ವದಲ್ಲಿ ಎಜುಕೇಷನ್ ಫಂಡ್ ಸಂಗ್ರಹ ಮಾಡಲಾಯಿತು.

