ಮಚ್ಚು’ಸ್ ಚಾಯ್ ಶಾಪ್ – ವರ್ಷ ಪೂರೈಸಿದ ಹಿನ್ನಲೆ ಸಾರ್ವಜನಿಕರಿಗೆ ಮೊಹಬ್ಬತ್ ಕಿ ಚಾಯ್ ಉಚಿತವಾಗಿ ವಿತರಣೆ…

ಸುಳ್ಯ: ಗಾಂಧಿನಗರ ಕರಾವಳಿ ಕಾಂಪ್ಲೆಕ್ಸ್ ನಲ್ಲಿ ಸಮಾಜ ಸೇವಕ ಮಸೂದ್ ಮಾಲಕತ್ವದ ಮಚ್ಚು’ಸ್ ಟೀ ಸ್ಟಾಲ್ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪ್ರಥಮ ವರ್ಷಾಚರಣೆಯ ಅಂಗವಾಗಿ ಬೆಳಗ್ಗೆ ಯಿಂದ ಮಧ್ಯಾಹ್ನ ದವರೆಗೆ ಉಚಿತವಾಗಿ ವಿವಿದ ಸ್ವಾದ ದ ಚಾ ವಿತರಿಸಲಾಯಿತು.
ಬೆಳಗ್ಗೆ ಯಿಂದ ಅಂಗಡಿಗೆ ಆಗಮಿಸಿದ ಎಲ್ಲರಿಗೂ ಉಚಿತ ಚಾಯ್ ಹಂಚುವ ಮೂಲಕ ವಿಶಿಷ್ಟವಾಗಿ ವರ್ಷಾಚರಣೆಯನ್ನು ಆಚರಿಸಲಾಯಿತು. ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಉದ್ಯಮಿ ಕಟ್ಟೆಕ್ಕಾರ್ಸ್ ಮೆಗಾ ಶಾಪ್ ಮಾಲಕ ಹಾಜಿ ಎಸ್ ಅಬ್ದುಲ್ಲ ಕಟ್ಟೆಕ್ಕಾರ್ಸ್ ರವರಿಗೆ ಚಾ ಮತ್ತು ಬಿಸ್ಕೆಟ್ ಹಸ್ತಾoತರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಕ್ಬರ್ ಕರಾವಳಿ, ರಿಯಾಜ್ ಕಟ್ಟೆಕ್ಕಾರ್ಸ್, ಶಹೀದ್ ಪಾರೆ, ಶಿಹಾಬ್ ಕಟ್ಟೆಕ್ಕಾರ್ಸ್ ಸೇರಿದಂತೆ ನೂರಾರು ಜನರು ಚಾ ಸವಿದರು.
