ಸಂಪಾಜೆ ಡಿವೈಡರ್ ಗೆ ಬೈಕ್ ಡಿಕ್ಕಿ- ಇಬ್ಬರು ಸ್ಥಳದಲ್ಲಿ ಸಾವು…

ಕೊಡಗು: ಜಿಲ್ಲೆಯ ಸಂಪಾಜೆ ಸಮೀಪ ಕೊಯಿನಾಡು ಎಂಬಲ್ಲಿ ಬೈಕ್ ಭೀಕರವಾಗಿ ಅಪಘಾತವಾಗಿದೆ.
ದುರ್ಘಟನೆಯಲ್ಲಿ ಇಬ್ಬರ ಸಾವು ಸಂಭವಿಸಿದೆ. ಭಾನುವಾರ ತಡರಾತ್ರಿ ಈ ಅಪಘಾತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಮತ್ತು ಇಬ್ಬರ ಮೃತ ದೇಹ ಚರಂಡಿಯಲ್ಲಿ ಪತ್ತೆಯಾಗಿದೆ.
ರಾತ್ರಿ ಬೈಕ್ ವೇಗವಾಗಿ ಬಂದು ಡಿವೈಡರ್ ಗೆ ಡಿಕ್ಕಿ ಯಾಗಿರಬಹುದೆಂದು ಶಂಕಿಸಲಾಗಿದೆ.
Sponsors