ಮಾ.9 – ಅರಂತೋಡಿ ನಲ್ಲಿ ಎಸ್ ಕೆ ಎಸ್ ಎಫ್ ಶಾಖೆ ವತಿಯಿಂದ ಮಜ್ಲಿಸುನ್ನೂರು ಮತ್ತು ಬೃಹತ್ ಇಫ್ತಾರ್ ಸಂಗಮ…

ಸುಳ್ಯ: ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ಮಜ್ಲಿಸ್ ನೂರ್ ಹಾಗೂ ಇಫ್ತಾರ್ ಕೂಟವು ಮಾ.9 ರಂದು ಸಂಜೆ 4 ಗಂಟೆಗೆ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ.
ಅರಂತೋಡು ಮಸೀದಿ ಖತೀಬರಾದ ಬಹು ಇಸ್ಮಾಯಿಲ್ ಫೈಝಿ ಗಟ್ಟಮನೆ ಯವರು ಮಜ್ಲಿಸ್ ನ್ನೂರು ನೇತೃತ್ವ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಅಧ್ಯಕ್ಷ ಜುಬೇರ್ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ,ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಹೀದ್, ಜಮಾತ್ ಕಾರ್ಯದರ್ಶಿ ಕೆ.ಎಂ. ಮೂಸಾನ್, ಸುಳ್ಯ ವಲಯ ಎಸ್ ಕೆ ಎಸ್ಎಸ್ ಎಫ್ ಅಧ್ಯಕ್ಷ ಅಬೂಬಕ್ಕರ್ ಪೋಪಿ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮಜೀದ್,ನುಸ್ರತುಲ್ ಇಸ್ಲಾಂ ಮದರಸ ಸಂಚಾಲಕ ಅಮೀರ್ , ಬದ್ರುದ್ದೀನ್ ಪಟೇಲ್ ದುಬೈ ಕಮಿಟಿ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕಸ್ಟರ್ ಅಧ್ಯಕ್ಷ ಹಾಜಿ ರಜಾಕ್ ಕರಾವಳಿ ಸೇರಿದಂತೆ ಧಾರ್ಮಿಕ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ.ಎಂದು ಸಂಘಟಕರು ತಿಳಿಸಿದ್ದಾರೆ.

 

whatsapp image 2025 03 08 at 7.49.36 am

Related Articles

Back to top button