ಮುಹಿಯುದ್ದೀನ್ ಜುಮಾ ಮಸೀದಿ, ಹಯಾತುಲ್ ಇಸ್ಲಾಂ ಮದರಸ ಕಲ್ಲುಗುಂಡಿ- ಗಣರಾಜ್ಯೋತ್ಸವ ಆಚರಣೆ…

ಸುಳ್ಯ : ಮುಹಿಯುದ್ದೀನ್ ಜುಮಾ ಮಸೀದಿ ಕಲ್ಲುಗುಂಡಿ ಮತ್ತು ಹಯಾತುಲ್ ಇಸ್ಲಾಂ ಮದರಸ ವಠಾರದಲ್ಲಿ ಭಾರತದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಜಮಾಅತ್ ಸಮಿತಿ ಅಧ್ಯಕ್ಷರಾದ ಆಲಿ ಹಾಜಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸದರ್ ಮುಅಲ್ಲಿಂ ಸಈದ್ ಫೈಝಿಯವರು ಸ್ವಾಗತಿಸಿದರು. ಕಲ್ಲುಗುಂಡಿ ಮಸೀದಿ ಖತೀಬರಾದ ಅಬ್ದುಲ್ ನಾಸಿರ್ ದಾರಿಮಿ ಮುಖ್ಯ ಭಾಷಣ ನಡೆಸಿ ಗಣರಜ್ಯೋತ್ಸವದ ಮಹತ್ವದ ಬಗ್ಗೆ, ದೇಶ ಪ್ರೇಮದ ದೇಶದೊಂದಿಗೆ ಮುಸ್ಲಿಂ ಸಮುದಾಯದ ಸೇವೆಯ ಬಗ್ಗೆ ತಿಳಿಸಿ ಸಮುದಾಯ ದೇಶಕ್ಕಾಗಿ ಹೆಚ್ಚು ಕ್ರಿಯಾಶೀಲರಾಗಿ ದುಡಿಯುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿ ದೇಶದ ಒಳಿತಿಗೆ ಪ್ರಾರ್ಥಿಸಿದರು, PWD ಕಾಂಟ್ರಾಕ್ಟರ್ ಅಶ್ರಫ್ ಬಾಲಂಬಿ ಶುಭ ಹಾರೈಸಿ ಮಾತನಾಡಿದರು, ಹಯಾತುಲ್ ಇಸ್ಲಾಂ ಮದ್ರಸ ಕಲ್ಲುಗುಂಡಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಮಸೀದಿ ಪ್ರಧಾನ ಕಾರ್ಯದರ್ಶಿ ಪಿ. ಎಮ್ ಮುಹಮ್ಮದ್ ಇರ್ಷಾದ್, ಉಪಾಧ್ಯಕ್ಷರು ಅಶ್ರಫ್ ಕೆ ಎಮ್ , ಕೋಶಾಧಿಕಾರಿ ಅಬೂಬಕ್ಕರ್ ಸೂಪರ್, ಜೊತೆ ಕಾರ್ಯದರ್ಶಿ ಹನೀಫ್ ಚಟ್ಟೆಕಲ್ ಮತ್ತು ರಫೀಕ್ ಕೆ ಎಮ್, ಇಬ್ರಾಹಿಂ ಏ ಕೆ ,ಅಬ್ದುಲ್ಲ ಹಾಜಿ ಹಾನೆಸ್ಟ್ , ರಜಾಕ್ ಸೂಪರ್ ಹಾಗೂ ಸಹ ಅಧ್ಯಾಪಕರಾದ ಸಾಜಿದ್ ಅಝ್ಹರಿ , ಮತ್ತು ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಹಮ್ಮದ್ ಆರಿಫ್ ಫೈಝಿ ಅಲ್ ಮಅಬರಿಯವರು ಗಣರಾಜ್ಯೋತ್ಸವದ ಶುಭಾಶಯ ತಿಳಿಸಿ ವಂದಿಸಿದರು.ಸಿಹಿ ತಿಂಡಿ ವಿತರಿಸಲಾಯಿತು.

Related Articles

Back to top button