ಅರಂತೋಡಿನಲ್ಲಿ ಪಠೇಲ್ ರೆಸಿಡೆನ್ಸಿ ಹಾಗೂ ಕಾಂಪ್ಲೆಕ್ಸ್ ಉದ್ಘಾಟನೆ, ಇಪ್ತಾರ್ ಕೂಟ…

ಪಠೇಲ್ ಕುಟುಂಬದ ಯುವಕರು ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವುದು ಶ್ಲಾಘನೀಯ – ಟಿ.ಎಂ ಶಹೀದ್ ತೆಕ್ಕಿಲ್...

ಸುಳ್ಯ: ಅರಂತೋಡಿನ ತೆಕ್ಕಿಲ್ ಸಮುದಾಯ ಭವನ ಬಳಿ ನಿರ್ಮಾಣಗೊಂಡ ಸೈಪುದ್ಧೀನ್ ಪಠೇಲ್ ಮಾಲಕತ್ವದ ನೂತನ ಪಠೇಲ್ ವಸತಿಗೃಹ ಹಾಗೂ ಕಾಂಪ್ಲೆಕ್ಸ್ ನ ಉದ್ಘಾಟನೆಯು ಮಾ. 28 ರಂದು ನಡೆಯಿತು.
ನೂತನ ಪಠೇಲ್ ಕಾಂಪ್ಲೆಕ್ಸ್ ನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಉದ್ಘಾಟಿಸಿ ಮಾತನಾಡಿ ಐದು ತಲೆಮಾರಿನಿಂದ ಅರಂತೋಡಿನ ಅಭಿವೃದ್ಧಿಗೆ ಪಠೇಲ್ ಕುಟುಂಬದವರು ಕೊಡುಗೆಯನ್ನು ನೀಡಿದ್ದಾರೆ. ಪಠೇಲ್ ಕುಟುಂಬದ ಯುವಕರು ದುಬೈಯಲ್ಲಿ ದುಡಿದು ಗಳಿಸಿದ ಸಂಪತ್ತಿನಿಂದ ಊರಿನ ಅಭಿವೃದ್ಧಿಗೆ ತೊಡಗಿಸಿಕೊಂಡಿರುವುದಲ್ಲದೆ ಉದ್ಯಮ,ವ್ಯಾಪಾರದಲ್ಲಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದರು. ತಮ್ಮ ತಾಯ್ನಾಡಿನಲ್ಲಿ ಪಠೇಲ್ ಚಾರಿಟೇಬಲ್ ಟ್ರಸ್ಟ್ ನ್ನು ಸ್ಥಾಪಿಸಿ, ಶಿಕ್ಷಣಕ್ಕೆ ಮತ್ತು ಆರೋಗ್ಯದಂತ ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಯುವಕರು ಸ್ವದ್ಯೋಗದ ಮೂಲಕ ಸ್ವಂತ ಕಾಲಲ್ಲಿ ನಿಲ್ಲುವಂತೆ ಅವರು ಕರೆ ನೀಡಿದರು. ಪಠೇಲ್ ಕುಟುಂಬದ ಹಿರಿಯರಾದ ಹಾಜಿ ಅಬ್ದುಲ್ ಖಾದರ್ ಪಠೇಲ್ ಪಠೇಲ್ ರೆಸಿಡೆನ್ಸಿಯನ್ನು ಉದ್ಘಾಟಿಸಿದರು. ಅರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು.
ಅಧ್ಯಕ್ಷತೆಯನ್ನು ಪಠೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಬದುರುದ್ದೀನ್ ಪಠೇಲ್ ವಹಿಸಿದರು. ಪಠೇಲ್ ರೆಸಿಡೆನ್ಸಿ ಮತ್ತು ಕಾಂಪ್ಲೆಕ್ಸ್ ನ ಮಾಲಕ ಸೈಪುದ್ದೀನ್ ಪಠೇಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ, ಸುಳ್ಯ ನಗರ ಪ್ರ್ರಾಧಿಕಾರದ ಅಧ್ಯಕ್ಷ ಕೆ.ಎಮ್ ಮುಸ್ತಫ, ವಿಶ್ರಾಂತ ಪ್ರಾಂಶುಪಾಲ ಕೆ.ಆರ್. ಗಂಗಾಧರ ಶುಭ ಹಾರೈಸಿದರು. ಸಮಾರಂಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎಮ್ ಮುಸ್ತಫ, ಕೆ.ಡಿ.ಪಿ ಸದಸ್ಯ ಅಶ್ರಫ್ ಗುಂಡಿ, ಇಂಜಿನಿಯರ್ ನಾಸಿರ್ ಪೆರಾಜೆ, ಕಟ್ಟಡ ನಿರ್ಮಾಣ ಗುತ್ತಿಗೆದಾರ ಎ.ಹನೀಫ್ ಇವರನ್ನು ಪಠೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಅರಂತೋಡು ಮತ್ತು ಬಿಳಿಯಾರ್ ಮದರಸದಲ್ಲಿ 10,7 ಮತ್ತು 5 ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ ಸಂಚಾಲಕ ಕೆ.ಆರ್ ಪದ್ಮನಾಭ, ನಿವೃತ್ತ ವಲಯಾರಣ್ಯಾಧಿಕಾರಿ ಹೂವಯ್ಯ ಗೌಡ ನೂಜಿಕಲ್ಲು, ಹಮೀದ್ ಹಾಜಿ ಸುಳ್ಯ, ಅನ್ಸಾರಿಯ ಯತೀಮ್ ಖಾನ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತ, ನಗರ ಪಂಚಾಯತ್ ಸದಸ್ಯರಾದ ರಿಯಾಝ್ ಕಟ್ಟೆಕ್ಕಾರ್, ಸಿದ್ಧೀಕ್ ಕೊಕ್ಕೊ, ಕೆ.ಬಿ ಇಬ್ರಾಹಿಂ, ಲತೀಫ್ ಸುಳ್ಯ, ಪತ್ರಕರ್ತ ಶರೀಫ್ ಜಟ್ಟಿಪಳ್ಳ, ತಾಜ್ ಮೊಹಮ್ಮದ್ ಸಂಪಾಜೆ, ಹಾಜಿ ಕೆ.ಎಂ ಮಹಮ್ಮದ್, ಎಸ್.ಎಮ್ ಅಬ್ದುಲ್ ಮಜೀದ್, ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಸಂಶುದ್ಧೀನ್ ಮುಸ್ಲಿಯಾರ್ ಬಿಳಿಯಾರು, ನೌಶಾದ್ ಅಝ್ ಹರಿ, ಕೆ.ಎಂ ಮೂಸಾನ್, ಅಮೀರ್ ಕುಕ್ಕುಂಬಳ ತಾಜುದ್ದೀನ್ ಅರಂತೋಡು ಮೊದಲಾದವರು ಉಪಸ್ಥಿರಿದ್ದರು. ಮೌಲಾನ ಅತಾವುಲ್ಲ ವಂದಿಸಿದರು. ಕಮಾಲ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಇಫ್ತಾರ್ ಕೂಟ ನಡೆಯಿತು. ಸುಮಾರು 200 ಕ್ಕಿಂತ ಅಧಿಕ ಮಂದಿ ಇಫ್ತಾರ್ ನಲ್ಲಿ ಭಾಗವಹಿಸಿದರು.

whatsapp image 2025 03 29 at 11.57.38 am

whatsapp image 2025 03 29 at 11.57.56 am

whatsapp image 2025 03 29 at 11.57.44 am

whatsapp image 2025 03 29 at 11.57.50 am

Sponsors

Related Articles

Back to top button