ವೀಣಾ ಬನ್ನಂಜೆ ಇವರಿಂದ ಶ್ರೀಮದ್ ಭಾಗವತ ಸಪ್ತಾಹ…

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಒಂದು ವಾರಗಳ ಪರ್ಯಂತ ವೀಣಾ ಬನ್ನಂಜೆ ಇವರಿಂದ ಜರಗಲಿರುವ ಶ್ರೀಮದ್ ಭಾಗವತ ಸಪ್ತಾಹ ಏ.21 ರಂದು ಆರಂಭಗೊಂಡಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೀಪ ಪ್ರಜ್ವಲನಗೊಳಿಸಿ ಇಂತಹ ಪುಣ್ಯ ಕಾರ್ಯಗಳು ದೇವಸ್ಥಾನಗಳಲ್ಲಿ ಜರಗಿ ಭಕ್ತರು ಭಕ್ತಿ ಮಾರ್ಗದಲ್ಲಿ ನಡೆಯುವಂತಾಗುತ್ತದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ ಕೆ ಪ್ರಭಾಕರ ಭಟ್ ಮಾತನಾಡಿ ಹಿಂದುಗಳಿಗೆ ದಾರಿದೀಪವಾಗುವಂತಹ ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗುತ್ತದೆ. ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಕೆ ರಾಧಾಕೃಷ್ಣ ಆಳ್ವ, ಶ್ರೀ ನಾಲ್ಕಾ ತಾಯ ದೈವದ ಪಾತ್ರಿ ಶಂಕರ ಪೂಜಾರಿ ಯಾನೆ ಕೊಚ ಪೂಜಾರಿ, ನೋಣಯ್ಯ ನಲೀಕೆ ಮೊದಲಾದವರು ಉಪಸ್ಥಿತರಿದ್ದರು.