ನಾರಾಯಣ ಗುರುವರ್ಯರ 165 ನೇ ಜನ್ಮದಿನಾಚರಣೆ….

ಬಂಟ್ವಾಳ: ಬಿಲ್ಲವ ಸಂಘ ನಾರಾಯಣ ಗುರುವರ್ಯರ ತತ್ತ್ವ ಆದರ್ಶಗಳನ್ನೊಳಗೊಂಡ ಒಂದು ಸಂಪ್ರದಾಯಬದ್ಧವಾದ ಸಮಾಜವಾಗಿದೆ ಎಂದು .ಪ್ರಸಿದ್ಧ ಯಕ್ಷಗಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆಯವರು ಹೇಳಿದರು.
ಬಿಲ್ಲವ ಸಮಾಜ ಸೇವಾ ಸಂಘ ರಿ ಕಲ್ಲಡ್ಕ ವಲಯ ಇದರ ಆಶ್ರಯದಲ್ಲಿ ಗೋಳ್ತಮಜಲು ,ಬಾಳ್ತಿಲ ,ವೀರಕಂಬ ,ಅಮ್ಟೂರು, ಬೋಳಂತೂರು, ಬೊಂಡಾಲ ಗ್ರಾಮಗಳ ಸೇರುವಿಕೆಯಲ್ಲಿ ಕಲ್ಲಡ್ಕ ಪದ್ಮಾವತಿ ಕಲ್ಯಾಣ ಮಂಟಪ ದಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 165 ನೇ ಜನ್ಮದಿನಾಚರಣೆ ಪ್ರಯುಕ್ತ ನಡೆದ ಗುರು ಪೂಜೆಯ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಆಪ್ತ ಸಹಾಯಕ ಜಗನ್ನಾಥ ಬಂಗೇರ ಇವರು ಮಾತನಾಡಿ ಬಿಲ್ಲವ ಸಮಾಜದ ಯುವ ಬಾಂದವರು ಎಂದಿಗೂ ದಾರಿ ತಪ್ಪದೆ ಸಂಸ್ಕಾರಯುತವಾಗಿ ಜೀವನ ನಡೆಸಬೇಕೆಂಬ ಹಿತ ನುಡಿದರು. ಕಲ್ಲಡ್ಕ ವಲಯ ಬಿಲ್ಲವ ಸಂಘದ ಅಧ್ಯಕ್ಷ ಶ್ರೀಯುತ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರಾದ ಜಯಂತ ನಡುಬೈಲು, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಸೇಸಪ್ಪ ಕೋಟ್ಯಾನ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ರಾಜ ಶೇಖರ ಕೋಟ್ಯಾನ್ ಚಲನಚಿತ್ರ ನಟಿ ನವ್ಯ ಪೂಜಾರಿ ಗ್ರಾಮ ಸಮಿತಿ ಅಧ್ಯಕ್ಷರುಗಳಾದ ಮನೋಜ್ ಕಟ್ಟೆಮಾರ್, ರಾಜೇಶ್ ಸುವರ್ಣ ಕೃಷ್ಣ ಕೊಡಿ , ಯತಿನ್ ಕುಮಾರ್ ಬೊಂಡಾಲ, ರವಿ ಸುವರ್ಣ ಬೈಲು, ಜಯಪ್ರಕಾಶ್ ತಕ್ಕಿ ಪಾಪು, ಆನಂದ ಪೂಜಾರಿ ಪ್ರಭುಗಳ ಬೆಟ್ಟು, ಉಪಸ್ಥಿತರಿದ್ದರು.
ಚೆನ್ನಪ್ಪ ಕೋಟ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿ. ಬಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಪೂಜಾರಿ ಹೊಸಕಟ್ಟೆ ಸ್ವಾಗತಿಸಿ. ವಸಂತ ಪೂಜಾರಿ ಭಟ್ಟ ಹಿತ್ತಿಲು ಧನ್ಯವಾದ ಸಮರ್ಪಿಸಿದರು. ದಿನೇಶ್ ಸುವರ್ಣ ಕೃಷ್ಣ ಕೊಡಿ ಕಾರ್ಯಕ್ರಮ ನಿರೂಪಿಸಿದರು .
ಸಭಾ ಕಾರ್ಯಕ್ರಮಕ್ಕೆ ಮೊದಲು ಶ್ರೀಕೇಶವ ಶಾಂತಿ ಅವರ ನೇತೃತ್ವದಲ್ಲಿ ಗುರು ಪೂಜೆ ಹಾಗೂ ಶ್ರೀ ಶಾರದಾಂಬ ಭಜನ ಮಂದಿರ ಶೃಂಗಗಿರಿ ಗುಂಡಿ ಮಜಲು ಇವರಿಂದ ಭಜನಾ ಸಂಕೀರ್ತನೆ ನಡೆಯಿತು.
ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ನ್ಯೂ ಎಕ್ಸ್ಟ್ರೀಮ್ ಡ್ಯಾನ್ಸ್ ಕ್ರಿವ್ ಬಿಸಿ ರೋಡ್ ಇವರಿಂದ ನೃತ್ಯ ಕಾರ್ಯಕ್ರಮ ಹಾಗೂ ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜರ್ ತಂಡದಿಂದ ತೆಳಿಕೆದ ಗೊಂಚಿಲ್ ಮನರಂಜನಾ ಕಾರ್ಯಕ್ರಮಗಳು ನಡೆಯಿತು.

Sponsors

Related Articles

Leave a Reply

Your email address will not be published. Required fields are marked *

Back to top button