ಸಹ್ಯಾದ್ರಿ ಕಾಲೇಜಿನಲ್ಲಿ ‘ಶಿಕ್ಷಕರಿಗೆ ವಿಶ್ಲೇಷಣೆ” ಕುರಿತು ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ…..
ಮಂಗಳೂರು:ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನ ಎಂಬಿಎ ವಿಭಾಗದಿಂದ ಪದವಿಪೂರ್ವ ಶಿಕ್ಷಕರಿಗಾಗಿ ಒಂದು ದಿನದ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ (FDP) ಸೆ.19 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ‘ಎಎಂಯುಸಿಟಿ’ ಮಾಜಿ ಅಧ್ಯಕ್ಷ, ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಉಮಪ್ಪ ಪೂಜಾರಿ, ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಡೇಟಾ ಅನಾಲಿಟಿಕ್ಸ್ ನ ಪ್ರಾಮುಖ್ಯತೆ ಬಗ್ಗೆ ಮತ್ತು ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದರ ಕುರಿತು ಮಾತನಾಡಿದರು. ‘ನಾವು ಡೇಟಾ ವಿಶ್ಲೇಷಣೆ ಮಾಡದಿದ್ದರೆ, ಅಲೆಕ್ಸಾ, ಸಿರಿ, ಗೂಗಲ್ ಇವರುಗಳು ಖಂಡಿತವಾಗಿಯೂ ನಮ್ಮನ್ನು ಬದಲಾಯಿಸುತ್ತಾರೆ ಮತ್ತು ಹಿಂದಟ್ಟುತ್ತಾರೆ ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ.ಆರ್.ಶ್ರೀನಿವಾಸ ರಾವ್ ಕುಂಟೆ ಅಧ್ಯಕ್ಷೀಯ ಭಾಷಣ ಮಾಡಿದರು. ಎಂಬಿಎ ನಿರ್ದೇಶಕ ಡಾ.ವಿಶಾಲ್ ಸಮರ್ಥಾ ಅವರು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಡಾ. ಅಜರ್ ಶಾಹೀನ್ ಶೇಖ್ ಅವರು ‘ಡೇಟಾ ಮತ್ತು ಅನಾಲಿಟಿಕ್ಸ್’ ಕುರಿತು, ಪ್ರೊ. ಗಿರೀಶ್ ಎಂ ಅವರು ‘ಕಟಿಂಗ್ ಎಡ್ಜ್ – ಮಾರ್ಕೆಟಿಂಗ್ ಅನಾಲಿಟಿಕ್ಸ್’ ಕುರಿತು, ಪ್ರೊ. ಸುಷ್ಮಾ ವಿ ಅವರು ಶಿಕ್ಷಕರಿಗೆ ‘ಎಚ್ಆರ್ ಅನಾಲಿಟಿಕ್ಸ್ – ನೋ ರಾಕೆಟ್ ಸೈನ್ಸ್’ ವಿಷಯದ ಕುರಿತು ಮಾಹಿತಿ ನೀಡಿದರು.