ರವೆ ಲಾಡು….
ರವೆ ಲಾಡು ತಯಾರಿಸುವ ವಿಧಾನ:
ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಗೂ ರವೆಯನ್ನು ಹಾಕಿ ಹದವಾದ ಉರಿಯಲ್ಲಿ ಹುರಿದುಕೊಳ್ಳಬೇಕು. ರವೆ ಸೀದು ಹೋಗಬಾರದು.
ಅದಕ್ಕೆ ಸಿಹಿಗೆ ಬೇಕಾದಷ್ಟು ಸಕ್ಕರೆ, ಸ್ವಲ್ಪ ತೆಂಗಿನಕಾಯಿ ತುರಿ ಮತ್ತು ಹಾಲಿನಪುಡಿ ಹಾಕಿ ಚೆನ್ನಾಗಿ ಬೆರೆಸುತ್ತಾ ಇರಬೇಕು. ನಂತರ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ ಸೇರಿಸಿ. ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಬೆರೆಸಬೇಕು. ಅದಕ್ಕೆ ತುಪ್ಪ ಮತ್ತು ಸ್ವಲ್ಪ ಹಾಲು ಹಾಕಿ ಒಂದೆರಡು ನಿಮಿಷ ಬೆರೆಸಿ ಒಲೆಯಿಂದ ಕೆಳಗಿಳಿಸಿ. ರವೆಯ ಮಿಶ್ರಣವನ್ನು ತುಂಬಾ ತೆಳುವಾಗಿ ಅಥವಾ ಪುಡಿ ಪುಡಿಯಾಗಿ ತಯಾರಿಸದೆ, ಸರಿಯಾದ ಹದದಲ್ಲಿ ತಯಾರಿಸಿದರೆ ಉಂಡೆಗಳನ್ನು ಕಟ್ಟಲು ಸುಲಭವಾಗುತ್ತದೆ. ಸ್ವಲ್ಪ ತಣ್ಣಗಾದ ಮೇಲೆ ಕೈಗೆ ತುಪ್ಪ ಹಚ್ಚಿಕೊಂಡು ತಯಾರಿಸಲಾದ ರವೆಯ ಮಿಶ್ರಣವನ್ನು ಯಾವ ಗಾತ್ರದ ಉಂಡೆ ಬೇಕೋ ಆ ರೀತಿ ಉಂಡೆ ತಯಾರಿಸಿ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುತ್ತವೆ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟುಕೊಂಡರೆ ಕೆಲವು ದಿನ ಸಂಗ್ರಹಿಸಿಡಬಹುದು.
ಬರಹ: ಶ್ರೀಮತಿ ರಶ್ಮಿ ಪಿ.ಸಿ