ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜೀಪಮೂಡ-ಮಹಾಶಿವರಾತ್ರಿ ಪೂಜೆ,ಜಾತ್ರೆ…

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜೀಪಮೂಡ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಪೂಜೆ ಉತ್ಸವ ಮಾ.11 ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮ ಶ್ರೀ ನೀಲೇಶ್ವರ ಕೆ.ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪುಣ್ಯ ಪಂಚಗವ್ಯ ಗಣಯಾಗ, ಸಾನಿಧ್ಯ ಕಲಶಾಭಿಷೇಕ, ಫಲಪಂಚಾಮೃತ ಅಭಿಷೇಕ, ಶ್ರೀ ರುದ್ರ ಸೂಕ್ತ ಅಭಿಷೇಕ, ಪ್ರಸನ್ನ ಪೂಜೆ, ದೈವಗಳಿಗೆ ಕಲಶ ಹಾಗೂ ಪರ್ವ ಸೇವೆ, ಅನ್ನದಾನ, ವಿವಿಧ ಭಜನಾ ತಂಡಗಳಿಂದ ನಾಮಸಂಕೀರ್ತನೆ, ಜಾತ್ರೆ, ರಂಗಪೂಜೆ, ದೇವರ ಬಲಿ, ರಾಜಾಂಗಣ ಪ್ರಸಾದ ವಸಂತ ಕಟ್ಟೆಪೂಜೆ, ದರ್ಶನ ಬಲಿ, ಮಂತ್ರಾಕ್ಷತೆ, ಅನ್ನದಾನ ನಡೆಯಲಿದೆ. ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಇವರಿಂದ ಉತ್ತರ ಕೋರ್ಲೆ ತುಳು ಹಾಸ್ಯಮಯ ನಾಟಕ ಜರಗಲಿದೆ.