ಸುಳ್ಯ- ಆಸಿಯ, ಕಲೀಲ್ ಪ್ರಕರಣ:ಸಂಧಾನ ವಿಫಲ…ಕಲೀಲ್ ನ ಪೂಟ್ ವೇರ್ ನಲ್ಲಿ ಧರಣಿ ಕುಳಿತ ಆಸಿಯ…
ಸುಳ್ಯ: ಆಸಿಯ- ಇಬ್ರಾಹಿಂ ಕಲೀಲ್ ಕಟ್ಟೆಕ್ಕಾರ್ ಪ್ರಕರಣವು ಇಂದು ನಡೆದ ಸಂಧಾನಕಾರರ ಸಭೆಯಲ್ಲಿ ಅಂತಿಮ ನಿರ್ಣಯ ಸಿಗದ ಕಾರಣ ಆಸಿಯ ಗಾಂಧಿನಗರ ಕಟ್ಟೆಕಾರ್ ಫೂಟ್ ವೇರ್ ಮಳಿಗೆಯಲ್ಲಿ ಧರಣಿ ಕುಳಿತ ಘಟನೆ ನಡೆದಿದೆ.
ಆಸಿಯ-ಕಲೀಲ್ ಪ್ರಕರಣವನ್ನು ಶಮನಗೊಳಿಸಲು ಮುಸ್ಲಿಂ ಸಂಘಟನೆಗಳು ಮತ್ತು ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಸಮಿತಿಯ ನೇತೃತ್ವದಲ್ಲಿ ಡಿಸೆಂಬರ್ 1 ರಂದು ಸಭೆ ಸೇರಿ , ಕಲೀಲ್ ರವರ ತಂದೆ ಸೇರಿದಂತೆ ಕುಟುಂಬಸ್ಥರನ್ನು ಕರೆಸಿ ಸಭೆಯನ್ನು ನಡೆಸಿ ಡಿಸೆಂಬರ್ 9ರಂದು ಕಲೀಲ್ ರವರನ್ನು ಸುಳ್ಯದ ಸಂಧಾನ ಸಭೆಗೆ ಕರೆತರುವಂತೆ ಅವರ ತಂದೆಗೆ ನಿರ್ದೇಶನವನ್ನು ನೀಡಲಾಗಿತ್ತು. ಆದರೆ ಇಂದು ನಡೆದ ಸಭೆಗೆ ಕಲೀಲ್ ಬಾರದ ಕಾರಣ ಅಂತಿಮ ನಿರ್ಣಯವನ್ನು ನೀಡಿ ಪ್ರಕರಣಕ್ಕೆ ಸುಖಾಂತ್ಯ ಗೊಳಿಸಲು ಮುಸ್ಲಿಂ ಮುಖಂಡರಿಗೆ ಸಾಧ್ಯವಾಗಲಿಲ್ಲ. ಸಂಜೆ 6 ಗಂಟೆಯ ವೇಳೆಗೆ ಮುಖಂಡರು ಮತ್ತು ಆಸಿಯಾ ಸುಳ್ಯ ವೃತ್ತ ನಿರೀಕ್ಷಕರ ಕಛೇರಿಗೆ ತೆರಳಿ, ಇಂದು ನಡೆದ ಘಟನೆಗಳನ್ನು ವಿವರಿಸಿ, ಕಳೆದ ಹಲವು ತಿಂಗಳುಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಸಮಿತಿ ವತಿಯಿಂದ ಈ ಘಟನೆಯನ್ನು ಸುಖಾಂತ್ಯ ಗೊಳಿಸಲು ಹಲವಾರು ಬಾರಿ ಪ್ರಯತ್ನಿಸಿದರೂ ಕಲೀಲ್ ಮತ್ತು ಅವರ ತಂದೆ ಹಾಗೂ ಸಹೋದರ ಇದಕ್ಕೆ ಸ್ಪಂದನೆ ನೀಡದ ಕಾರಣ ಪ್ರಕರಣವನ್ನು ಮುಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಅನಾಹುತಗಳು ಸಂಭವಿಸಿದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ತಮ್ಮ ವತಿಯಿಂದ ಹೇಳಿಕಾ ಪತ್ರವನ್ನು ನೀಡಿದ್ದಾರೆ.
ಇದೀಗ ಆಸಿಯ ರವರು ಸುಳ್ಯ ಗಾಂಧಿನಗರದ ಕಟ್ಟೆಕಾರ್ ಫೂಟ್ ವೇರ್ ಮಳಿಗೆಯಲ್ಲಿ ಧರಣಿ ಕುಳಿತಿದ್ದಾರೆ.
ಮಾದ್ಯಮ ದೊಂದಿಗೆ ಪ್ರತಿಕ್ರಿಯಿಸಿದ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಂಗಳೂರು ಮಾಜಿ ಮೇಯರ್ ಅಶ್ರಫ್ ಮಾತನಾಡಿ, ಒಬ್ಬ ಹಿಂದೂ ಧರ್ಮದ ಮಹಿಳೆ ಮುಸ್ಲಿಂ ಧರ್ಮಕ್ಕೆ ಬಂದು ನಡುಬೀದಿಯಲ್ಲಿ ಬಿದ್ದಾಗ ಅವಳಿಗೆ ನ್ಯಾಯ ಕೊಡಿಸುವುದು ನಮ್ಮ ಧರ್ಮವಾಗಿದೆ. ಕಲೀಲ್ ರವರು ಇವರನ್ನು ಮದುವೆ ಮಾಡಿಕೊಂಡು ಈಗ ಸಂಪರ್ಕಕ್ಕೆ ಸಿಗದೇ ಇರುವುದರಲ್ಲಿ ಅರ್ಥವಿಲ್ಲ. ಇದರಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಕಪ್ಪುಚುಕ್ಕೆ ಆದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ಹಲವಾರು ಬಾರಿ ಶ್ರಮಿಸಿದೆವು. ಆದರೆ ಕಲೀಲ್ ರವರ ಭಾಗದಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಘಟನೆಯು ಬೆಳೆಯುತ್ತಾ ಬರುತ್ತಿದೆ. ಅತೀ ಶೀಘ್ರದಲ್ಲಿ ಈ ವಿಷಯ ಸುಖಾಂತ್ಯಗೊಂಡ ಅವರಿಬ್ಬರು ಶಾಂತಿಯಿಂದ ಕೂಡಿ ಬಾಳುವ ಅವಕಾಶ ಬರುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.