ಸುಳ್ಯ ಪೊಲೀಸ್ ಠಾಣೆ ಯಲ್ಲಿ ಹಿರಿಯ ನಾಗರಿಕರ ಸಭೆ, ಸೈಬರ್ ಕ್ರೈಂ ಬಗ್ಗೆ ಮಾಹಿತಿ ಶಿಬಿರ…

ಹೊರಗಿನವರನ್ನು ಕೆಲಸಕ್ಕೆ ಸೇರಿಸುವಾಗ ದಾಖಲೆ ಪಡೆದುಕೊಳ್ಳಿ , ಸೈಬರ್ ಕ್ರೈಂ ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ : ಸಬ್ಇನ್ಸ್ಪೆಕ್ಟರ್ ದಿಲೀಪ್…

ಸುಳ್ಯ: ಸುಳ್ಯ ಪೊಲೀಸ್ ಠಾಣೆ ಯಲ್ಲಿ ನಡೆದ ಹಿರಿಯ ನಾಗರಿಕರ ಸಭೆಯಲ್ಲಿ ಮಾತನಾಡಿದ ಎಸ್. ಐ. ಯವರು ಮಾನವ ಸಂಬಂಧ ಗಳು ದೂರವಾಗುವುದರಿಂದ ಹಣ, ಭೋಗ ಜೀವನ ದ ಆಮಿಷ ಸೈಬರ್ ಕ್ರೈಂ ಗಳು ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ತಾಲೂಕು ಪಿಂಚಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ರಾಂತ ಪ್ರಾoಶುಪಾಲ ದಾಮೋದರ ಗೌಡ, ಸಮರ್ಪಣಾ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ಕಮಲಾಕ್ಷಿ ಟೀಚರ್,ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ,ಉಮ್ಮರ್ ಕುರುಜಿಗುಡ್ಡೆ, ಲ| ರಾಮಚಂದ್ರ ಮುಳ್ಯ, ನಿವೃತ್ತ ಆರೋಗ್ಯ ಸಿಬ್ಬಂದಿ ಹೊಳ್ಳ, ಮೊದಲಾದದವರು ಅನಿಸಿಕೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಿಂಚಣಿದಾರರ ಸಂಘದ ಅಧ್ಯಕ್ಷ ಡಾಕ್ಟರ್ ರಂಗಯ್ಯ, ಬೆಳ್ಯಪ್ಪ ಗೌಡ ಬಿ. ಬಾಪುಸಾಹೇಬ್, ಚೆನ್ನಕೇಶವ ಜಾಲಸೂರ್,ನಿವೃತ್ತ ಉಪನ್ಯಾಸಕ ಅಬ್ದುಲ್ಲ ಆರಂತೋಡು, ಉಬೆದುಲ್ಲಾ ಕಟ್ಟೆಕ್ಕಾರ್ಸ್, ದೇವಿದಾಸ್, ಕೇಶವ ಮಾಸ್ಟರ್, ರೋಟೆರಿಯನ್ ಲಿಂಗಪ್ಪ ಗೌಡ, ವೈ. ಕೆ. ರಮಾ ಮೊದಲಾದರು ಭಾಗವಹಿಸಿದ್ದರು.
ಎಎಸ್ಐ ತಾರನಾಥ್, ಸಿಬ್ಬಂದಿ ಮೌಲಾ ಮೊದಲಾದವರು ಸಹಕರಿಸಿದರು.

Related Articles

Back to top button