ಟಿ. ಎಂ. ಶಹೀದ್ ಸನ್ಮಾನ ಸಮಾರಂಭ- ಸ್ಪೀಕರ್ ಯು. ಟಿ. ಖಾದರ್ ಭೇಟಿ, ಸಮಾರಂಭಕ್ಕೆ ಆಹ್ವಾನ…

ಮಂಗಳೂರು : ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಹಕಾರ, ಧಾರ್ಮಿಕ ಕ್ಷೇತ್ರದಲ್ಲಿ ಕಳೆದ 3 ದಶಕಗಳಿಂದ ಸೇವೆ ಸಲ್ಲಿಸಿ, ಜನಾನುರಾಗಿಯಾಗಿರುವ ಟಿ. ಎಂ. ಶಹೀದ್ ತೆಕ್ಕಿಲ್ ರವರ ಸನ್ಮಾನ ಸಮಾರಂಭ ವನ್ನು ಉದ್ಘಾಟಿಸಲಿರುವ ಕರ್ನಾಟಕ ವಿಧಾನಸಭಾ ಧ್ಯಕ್ಷ, ಟಿ. ಎಂ. ಶಹೀದ್ ರವರ ವಿದ್ಯಾರ್ಥಿ ಜೀವನದ ಒಡನಾಡಿ ಯು. ಟಿ. ಖಾದರ್ ಫರೀದ್ ರವರನ್ನು ಅಭಿನಂದನಾ ಸಮಿತಿ ಸದಸ್ಯರುಗಳು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಅಭಿನಂದನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಪದಾಧಿಕಾರಿಗಳಾದ ಪರಶುರಾಮ ಚಿಲ್ತಡ್ಕ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಕೆ. ಎಂ. ಮುಸ್ತಫ, ರಂಜಿತ್ ರೈ ಮೇನಾಲ, ರಾಧಾಕೃಷ್ಣ ಬೊಳ್ಳೂರು ಮೊದಲಾವರು ಉಪಸ್ಥಿತರಿದ್ದರು.

Related Articles

Back to top button