SSF ಇಲ್ಲುಮಿನೇಟ್ : ಯುವ ತಲೆಮಾರುಗಳು ಸುಭದ್ರ ಸಮೂಹ ಸೃಷ್ಟಿಸಬೇಕು- ಅನಸ್ ಅಮಾನಿ ಕಣ್ಣೂರು…

ಸುಳ್ಯ:ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ವತಿಯಿಂದ ಡಿವಿಷನ್, ಸೆಕ್ಟರ್, ಶಾಖಾ ಮಟ್ಟದ ಪ್ರತಿನಿಧಿಗಳಿಗೆ ಆಯೋಜಿಸಿದ ಇಲ್ಲ್ಯುಮಿನೇಟ್ ಕ್ಯಾಂಪ್ ಜೂ. 5ರಂದು ಗ್ರಾಂಡ್ ಪರಿವಾರ್ ಹಾಲ್ ನಲ್ಲಿ ಜರಗಿತು.
ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ ಅಧ್ಯಕ್ಷತೆಯಲ್ಲಿ ಸುನ್ನಿ ಜಂಇಯ್ಯತುಲ್ ಉಲಮಾ ಬೆಳ್ಳಾರೆ ಝೋನ್ ಅಧ್ಯಕ್ಷರಾದ ಹಸನ್ ಸಖಾಫಿ ಬೆಳ್ಳಾರೆ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಾಳಿಗಾಗಿ ಆಗಮಿಸಿದ ಎಸ್ಸೆಸ್ಸೆಫ್ ಕೇರಳ ರಾಜ್ಯ ಕಾರ್ಯದರ್ಶಿ ಅನಸ್ ಅಮಾನಿ ಪುಷ್ಪಗಿರಿ ತರಗತಿ ಮಂಡಿಸಿದರು. ಯುವ ಪೀಳಿಗೆಯ ನಡವಳಿಕೆ ಹಾಗೂ ಸಂಘಟನೆಯ ಪ್ರಾಮುಖ್ಯತೆಯ ಬಗ್ಗೆ ವಿಷಯ ಪ್ರಸ್ತಾಪಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನ್ ಅಧ್ಯಕ್ಷರಾದ ಹಮೀದ್ ಬೀಜಕೊಚ್ಚಿ, ಪ್ರ. ಕಾರ್ಯದರ್ಶಿ ಹನೀಫ್ ಹಾಜಿ ಇಂದ್ರಾಜೆ, ಕೋಶಾಧಿಕಾರಿ ಹಮೀದ್ ಸುಣ್ಣಮೂಲೆ, ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯ ಸಿದ್ದೀಕ್ ಕಟ್ಟೆಕ್ಕಾರ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷರುಗಳಾದ ಜಬ್ಬಾರ್ ಸಖಾಫಿ, ಫೈಝಲ್ ಝುಹ್ರಿ, ದಾರುಲ್ ಹುದಾ ತಂಬಿನಮಕ್ಕಿ ಜನರಲ್ ಮ್ಯಾನೇಜರ್ ಖಲೀಲ್ ಹಿಮಮಿ ಸಖಾಫಿ, ಕೆ.ಸಿ.ಎಫ್ ಒಮಾನ್ ರಾಷ್ಟ್ರೀಯ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ, ಕೆ.ಸಿ.ಎಫ್ ದುಬೈ ಕಾರ್ಯದರ್ಶಿ ಮುಸ್ತಫ ಪನ್ನೆ ಮುಖ್ಯ ಅತಿಥಿಗಳಾಗಿದ್ದರು.
ಸುಳ್ಯ ಡಿವಿಷನ್ ವ್ಯಾಪ್ತಿಯ 21 ಯುನಿಟ್ ಗಳ ಆಯ್ದ ಕಾರ್ಯಕರ್ತರಿಗೆ ಆಯೋಜಿಸಿದ ಶಿಬಿರದಲ್ಲಿ ಪ್ರತಿನಿಧಿಗಳು ಭಾಗವಹಿಸಿದರು. ಉನೈಸ್ ಸಖಾಫಿ ಸ್ವಾಗತಿಸಿ ನಿಯಾಝ್ ಎಲಿಮಲೆ ವಂದಿಸಿದರು.
