ಕೆಎಫ್ ಡಿಸಿ ಎಂಡಿ ರಾಧಾದೇವಿ ಸುಳ್ಯ ಭೇಟಿ – ರಬ್ಬರ್ ಕಾರ್ಮಿಕರ ಸಮಸ್ಯೆಗಳಿಗೆ ಸಕಾರಾತ್ಮಕ ಸ್ಪಂದನೆಯ ಭರವಸೆ…
ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ…
ಸುಳ್ಯ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಪ್ರದಾನ ವ್ಯವಸ್ಥಾಪಕರಾದ, ಅಪರ ಮುಖ್ಯ ಅರಣ್ಯ ಸಂರ ರಕ್ಷಣಾಧಿಕಾರಿ ರಾಧಾದೇವಿಯವರು ಜು.1 ರಂದು ಸುಳ್ಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಧಾದೇವಿಯವರು ರಬ್ಬರ್ ತೋಟ ಕಾರ್ಮಿಕರಿಗೆ ಈಗ 12% ಬೋನಸ್ ನೀಡುತ್ತೇವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ 20% ಬೋನಸ್ ನೀಡಲಾಗುವುದು ಕಾರ್ಮಿಕರ, ಅಧಿಕಾರಿಗಳ ಪರಿಶ್ರಮದಿಂದ ನಿಗಮ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಲೆನಾಡು ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫಾ, ಟ್ರಸ್ಟ್ ಪದಾಧಿಕಾರಿ ಸಿದ್ದೀಕ್ ಕೊಕ್ಕೋ, ಕೆಎಫ್ ಡಿ ಸಿ ವಿಭಾಗೀಯ ವ್ಯವಸ್ಥಾಪಕರಾದ ಹರ್ಷವರ್ಧನ್, ಸುಬ್ರಹ್ಮಣ್ಯ ವಿಭಾಗ ದ ವಿಭಾಗಿಯ ಉಪ ವ್ಯವಸ್ಥಾಪಕರಾದ, ಸ್ನೇಹ ಕುಮಾರಿ ಕಾಂಬ್ಳಿ, ಐವರ್ನಾಡು ವಿಭಾಗ ಸಹಾಯಕ ವ್ಯವಸ್ಥಾಪಕ ಅರುಣ್ ಕುಮಾರ್, ಐವರ್ನಾಡು ತೋಟಾಧೀಕ್ಷಕ ಪ್ರದೀಪ್, ಅರಣ್ಯ ರಕ್ಷಕರಾದ ಲೆಜಿ ಜೋಸೆಫ್, ರಾಮಕುಮಾರ್, ಚಾಲಕ ಬಸವರಾಜ್, ಕಾರ್ಮಿಕರುಗಳಾದ ಎಂ. ಎಸ್. ಕುಮಾರ್, ಗಣೇಶ್ ನಾಗಪಟ್ಟಣ ಮೊದಲಾದವರು ಉಪಸ್ಥಿತರಿದ್ದರು.