ಮಾಜಿ ಸಚಿವ ಎಸ್ ಅಂಗಾರ ಶಿಫಾರಸ್ಸಿನ ಕಾಮಗಾರಿಗೆ ಹಣ ಬಿಡುಗಡೆ ಸರಕಾರದಲ್ಲಿ ಹಣ ಇಲ್ಲ, ಅಭಿವೃದ್ಧಿಯಾಗುತ್ತಿಲ್ಲ ಎಂಬುದಕ್ಕೆ ತಕ್ಕ ಉತ್ತರ, – ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್…

ವಖ್ಫ್ ಬಗ್ಗೆ ಅಪಪ್ರಚಾರ ಬಿ ಜೆ ಪಿ ಯತ್ನ ಖಂಡನೀಯ...

ಸುಳ್ಯ: ಮಾಜಿ ಶಾಸಕ ಹಾಗೂ ಸಚಿವ ಎಸ್ ಅಂಗಾರರು ಕೋರಿಕೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕರ್ನಾಟಕದ ಕಾಂಗ್ರೆಸ್ ಸರಕಾರ ಹಣ ಬಿಡುಗಡೆ ಮಾಡಿದ್ದು ಸರಕಾರದಲ್ಲಿ ಹಣ ಇಲ್ಲ ಅಭಿವೃದ್ಧಿಯಾಗುತ್ತಿಲ್ಲ ಎಂದು ಪದೆ ಪದೆ ಹೇಳಿಕೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿಯವರಿಗೆ ಮಾಜಿ ಸಚಿವ ಅಂಗಾರರ ಮೂಲಕ ಸಿದ್ದರಾಮಯ್ಯ ಸರಕಾರ ನೀಡಿದ ತಕ್ಕ ಉತ್ತರವಾಗಿದೆ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಬಣ್ಣಿಸಿದ್ದಾರೆ, ಮುಂದಿನ ದಿನಗಳಲ್ಲಿ ಬಿಜೆಪಿ ಮಾಜಿ ಸಚಿವರು ಶಾಸಕರಂತೆ ಮಾಜಿ ಶಾಸಕ ಅಂಗಾರ ಅವರು ಕಾಂಗ್ರೇಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ವಿಶ್ವಾಸ ವ್ಯಕ್ತಪಡಿಸಿದರು. ಸರಕಾರದಲ್ಲಿ ಹಣ ಇಲ್ಲ ಖಜಾನೆ ಖಾಲಿ ಎಂದು ಸರಕಾರವನ್ನು ಟೀಕಿಸಿದ ಪಕ್ಷದ ನಾಯಕರು ಇದಕ್ಕೆ ಉತ್ತರ ಕೊಡಬೇಕು. ಸತ್ಯವನ್ನು ಸುಳ್ಳಾಗಿಸುವ ಸುಳ್ಳನ್ನು ಸತ್ಯವಾಗಿಸುವ ಕೆಲಸ ಬಿಜೆಪಿಯಿಂದ ಮಾತ್ರ ಸಾಧ್ಯ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಮಾಡಿದ ಅನಗತ್ಯ ಆರೋಪ ಮತ್ತು ಟೀಕೆಗಳು, ಪಂಚ ಗ್ಯಾರಂಟಿಗಳನ್ನು ಸರಕಾರ ಸಮರ್ಥವಾಗಿ ಜಾರಿಗೊಳಿಸಿದ ಮೇಲೆ ಇಂದು ನಿಲ್ಲುತ್ತದೆ ನಾಳೆ ನಿಲ್ಲುತ್ತದೆ, ನಾಳಿದ್ದು ನಿಲ್ಲುತ್ತದೆ ಎಂದು ಗುಲ್ಲೆಬ್ಬಿಸುವುದುರ ಜೊತೆ ಎಲ್ಲಾ ಯೋಜನಗಳನ್ನು ತಮ್ಮ ಕಾರ್ಯಕರ್ತರು ನಾಯಕರು ಹೆಚ್ಚು ಆಸಕ್ತಿಯಿಂದ ಸದುಪಯೋಗಪಡಿಸುತ್ತಿರುವುದು ಹಾಸ್ಯಸ್ಪದ. ಮುಖ್ಯಮಂತ್ರಿಗಳು ರಾಜಿನಾಮೆ ಬಗ್ಗೆ ಮಾಧ್ಯಮಗಳ ಮೂಲಕ ಸರಕಾರದ ವಿರುದ್ಧ ಪದೇ ಪದೇ ಸುಳ್ಳು ಸಂದೇಶ ರವಾನಿಸುತ್ತಿರುವುದು ಖಂಡನೀಯ. ವಖ್ಫ್ ಹೆಸರಲ್ಲಿ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರ ದ್ವಂದ ನಿಲುವು ಖಂಡನೀಯ. 3 ಕ್ಷೇತ್ರದ ಉಪ ಚುನಾವಣೆ ಹಿನ್ನಲೆಯಲ್ಲಿ ಮತ ಕ್ರೂಡೀಕರಣಕಕ್ಕೆ ಬೇಕಾಗಿ ವಖ್ಫ್ ಬಗ್ಗೆ ಅನಗತ್ಯ ಹೇಳಿಕೆಗಳು ಕೊಡುತ್ತಿದ್ದಾರೆ. ಸರಕಾರಕ್ಕೆ ಅಭಿವೃದ್ಧಿಗೆ ಉತ್ತಮ ಸಲಹೆ ಸೂಚನೆಗಳನ್ನು ಕೊಡಬೇಕಾದ ವಿರೋಧ ಪಕ್ಷಗಳು ಕೇವಲ ಅಪಪ್ರಚಾರಕ್ಕೆ ಮಾತ್ರ ಸಮಯ ಮೀಸಲಿಟ್ಟು ಎರಡು ಸಮುದಾಯದ ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾತ್ರ ನಡೆಯಿತ್ತಿದ್ದು ಇದರಿಂದ ಮತ ಸಿಗಬಹುದು ಎಂಬ ಭ್ರಮೆಯಲ್ಲಿದ್ದಾರೆ,
ನ್ಯಾಯಯುತವಾಗಿ ದಾಖಲೆಯಲ್ಲಿ ಮತ್ತು ನೋಂದಾವಣೆಯಲ್ಲಿ ವಖ್ಫ್ ಮಾಡಿದ ಸ್ಥಳವನ್ನು ಯಾರೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಲ್ಲಿ ಅದನ್ನು ಸರಕಾರ ವಖ್ಫ್ ಮಂಡಳಿಗೆ ಹಿಂತಿರುಗಿಸಬೇಕು ಸಣ್ಣ ರೈತರಾಗಿದ್ದಲ್ಲಿ ಅವರಿಗೆ ಪರ್ಯಾಯ ಜಮೀನು ಅಥವ ಹಣಕಾಸಿನ ವ್ಯವಸ್ಥೆ ಮಾಡಲು ಸಲಹೆ ನೀಡಿದರು. ವಖ್ಫ್ ಭೂಮಿಯ ಒಂದಿಚು ಅಕ್ರಮ ಮಾಡಿದ ಯಾವುದೇ ಪಕ್ಷದ ಮುಖಂಡರಾಗಲಿ ಶಾಸಕರಾಗಿರಲಿ ಸಂಘ ಸಂಸ್ಥೆಯವರಾಗಲಿ ತಕ್ಷಣ ಅದನ್ನು ಹಿಂದಿರುಗಿಸಿ ಮಾದರಿಯಾಗಬೇಕೆಂದು ವಿನಂತಿಸಿದರು. ಈ ಬಗ್ಗೆ ಸರಕಾರ ಉಪ ಚುನಾವಣೆಯ ನಂತರ ವಖ್ಫ್ ಕಾನೂನಿನ ಬಗ್ಗೆ ಅಪಾರ ಅನುಭವ ಇರುವ ಕಾನೂನು ಪಂಡಿತರನ್ನು,ಮುಸ್ಲಿಂ ಸಮುದಾಯದ ಉಲಮಾರನ್ನು, ಸರ್ವ ಪಕ್ಷದ ನಾಯಕರನ್ನು ಕರೆದು ದುಂಡು ಮೆಜಿನ ಸಭೆ ನಡೆಸಿ ವಖ್ಫ್ ಅಸ್ತಿಗೆ ಒಂದು ಶಾಶ್ವತ ಪರಿಹಾರ ಕಂದುಕೊಳ್ಳಬೇಕೆಂದು ಟಿ ಎಂ ಶಾಹಿದ್ ತೆಕ್ಕಿಲ್ ಸರಕಾರವನ್ನು ಪತ್ರಿಕಾ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ.

Sponsors

Related Articles

Back to top button