ಸರಳ ವಿವಾಹವಾದ ನವದಂಪತಿಯಿಂದ ಕೃಷ್ಣಮಂತ್ರ ಜಪ ಸಂಕಲ್ಪ….

ಬೆಂಗಳೂರು: ಮದುವೆ ಮನೆಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮ ಸರ್ವೇಸಾಮಾನ್ಯ. ‘ಮಂಗಳ ನಿಧಿ’ ಕಾರ್ಯಕ್ರ ಮವನ್ನೂ ಆಯೋಜಿಸಲಾಗುತ್ತದೆ. ಹಸೆಮಣೆ ಯಿಂದೆದ್ದು ಹೋಗಿ ಮತದಾನ ಮಾಡಿ ಬಂದವರುಂಟು.ಆದರೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಗೋವರ್ಧನಗಿರಿ ಕ್ಷೇತ್ರ, ಉಡುಪಿ ಪುತ್ತಿಗೆ ಮಠದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ದಂಪತಿ ಕ್ಲೇಶನಾಶನ ಶ್ರೀಕೃಷ್ಣ ಮಂತ್ರ ಜಪ ಸಂಕಲ್ಪ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಹುಬ್ಬಳ್ಳಿ ಮೂಲದ ರಾಜೇಶ್ ಎಚ್.ಪಟಕಿ ಮತ್ತು ನೇತ್ರಾ ಆರ್.ಪಟಕಿ ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಂದರ್ಭ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಪ್ರೇರಿತರಾಗಿ ಶ್ರೀಕೃಷ್ಣ ಮಂತ್ರ ಜಪ ದೀಕ್ಷೆ ಸ್ವೀಕರಿಸಿದರು.
ಕುಟುಂಬ ಸಂಘಟನೆ, ಸಮಾಜ ಸಂಘಟನೆ, ಕ್ಲೇಶನಾಶ ಮತ್ತು ತದ್ವಾರಾ ವಿಶ್ವಶಾಂತಿಯನ್ನು ಲಕ್ಷ್ಯದಲ್ಲಿರಿಸಿಕೊಂಡು, ಭಾರತೀಯ ಸನಾತನ ಹಿಂದು ಧರ್ಮ, ಸಂಸ್ಕೃತಿ, ಮೌಲ್ಯ, ಕುಟುಂಬ ಪದ್ಧತಿಯನ್ನು ಉಳಿಸಲು ಪುತ್ತಿಗೆ ಶ್ರೀಗಳು ವಿಶೇಷ ಆಸ್ಥೆ ವಹಿಸಿದ್ದಾರೆ. ಈ ಬಾರಿ ಅವರ 46ನೇ ಚಾತುರ್ಮಾಸ್ಯ ವ್ರತದೀಕ್ಷೆಯ ಅವಧಿಯಲ್ಲಿ ಮೊದಲ ಆವೃತ್ತಿಯ ಜಪಯಜ್ಞ ನಡೆದು 37ಲಕ್ಷ ಜಪ ಸಮರ್ಪಣೆಯಾಗಿತ್ತು. ಈ ಪ್ರೇರಣೆಯೊಂದಿಗೆ ಎರಡನೇ ಆವೃತ್ತಿಯ ಜಪಸತ್ರ ಆರಂಭಗೊಂಡಿದ್ದು, ಕೃಷ್ಣಭಕ್ತಿಯ ವ್ಯಾಪಕ ಅಭಿಯಾನವಾಗಿ ರೂಪುಪಡೆದಿದೆ.
ಇದನ್ನರಿತ ರಾಜೇಶ್ ಮತ್ತು ನೇತ್ರಾ ಅವರು ನ.11ರಂದು ಅತ್ಯಾಪ್ತ ಬಂಧು ಮಿತ್ರರು ಮಾತ್ರ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಆದರ್ಶ -ಸರಳ ವಿವಾಹವಾಗಿ ಜೊತೆಯಲ್ಲೇ ಜಪಸಂಕಲ್ಪ ಸ್ವೀಕರಿಸಿದ್ದಾರೆ. ಡಿ.25ರಂದು ನಡೆಯುವ ಜಪ ಸಮರ್ಪಣಾ ಯಜ್ಞದಲ್ಲಿ ಪಾಲ್ಗೊಳ್ಳಲು ಬದ್ಧರಾದರು.ವಿಶೇಷವೆಂದರೆ ಈ ದಂಪತಿ ತಮ್ಮ ಜೊತೆಗೆ ಇತರ 24 ಮಂದಿಯನ್ನೂ ಈ ಜಪಸಂಕಲ್ಪದಲ್ಲಿ ತೊಡಗಿಸಲು ಕಾರಣವಾದರು. ಗೋವರ್ಧನಗಿರಿಧಾರಿಯ ಸಮ್ಮುಖದಲ್ಲಿ ಈ ಜಪಸಂಕಲ್ಪ ತೊಟ್ಟ ನೂತನ ವಧು-ವರರು ಮತ್ತು ಇತರ ಸಂಕಲ್ಪದೀಕ್ಷೆ ತೊಟ್ಟ ಬಂಧುಗಳನ್ನು ಕ್ಷೇತ್ರದ ವತಿಯಿಂದ ಹರಸಲಾಯಿತು.

Sponsors

Related Articles

Leave a Reply

Your email address will not be published. Required fields are marked *

Back to top button