ತುಳುವಿಗೆ ರಾಜ್ಯಭಾಷೆಯ ಸ್ಥಾನಮಾನ ಕೊಡುವಂತೆ ಸಿಎಂಗೆ ಶಾಸಕ ರಾಜೇಶ್ ನಾಯ್ಕ್ ಪತ್ರ…

ಬಂಟ್ವಾಳ: ತುಳುಭಾಷೆಗೆ ರಾಜ್ಯಭಾಷೆಯ ಸ್ಥಾನಮಾನಕೊಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಪತ್ರ ಬರೆದಿದ್ದಾರೆ.
ತುಳುಭಾಷೆ ಹಾಗೂ ತುಳುನಾಡಿನ ಜನರು ತಮ್ಮ ಭಾಷೆಯ ಮೇಲೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ.ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಬೇಕೆನ್ನುವುದು ಸಮಸ್ತ ತುಳುವರ ಹಲವು ವರ್ಷದ ಬೇಡಿಕೆಯಾಗಿದೆ. ತುಳುವಿಗೆ ತನ್ನದೇ ಆದ ಲಿಪಿ ಕೂಡ ಇದ್ದು, ಪ್ರಸ್ತುತ ದ.ಕ.,ಉಡುಪಿ ಜಿಲ್ಲೆಯ ಶಾಲೆಗಳಲ್ಲಿ 6 ನೇ ತರಗತಿಯಿಂದ 10ನೇ ತರಗತಿಯವರೆಗೆ 2009 ರಿಂದಲೇ ತುಳುಪಠ್ಯವನ್ನು ತೃತೀಯಭಾಷೆಯನ್ನಾಗಿ ಬೋಧಿಸಲಾಗುತ್ತಿದೆ ಹಾಗೆಯೇ ಪದವಿ, ಸ್ನಾತಕೋತ್ತರ ವಿಭಾಗದಲ್ಲಿಯೂ ತುಳುಪಠ್ಯವನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ತಿಳಿಸಿರುವ ಶಾಸಕ ರಾಜೇಶ್ ನಾಯ್ಕ್ ತುಳುಭಾಷೆಯ ಉಳಿವಿಗೆ ಮಾನ್ಯತೆಯನ್ನು ಸಲ್ಲಿಸುವ ಅವಕಾಶ ಬಂದಿದ್ದು, ಸಂವಿಧಾನದ 8 ನೇ ಪರಿಚ್ಚೇಧಕ್ಕೆ ಸೇರಿಸಲು ಪೂರಕವಾಗಿ ತುಳುವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button