ದ.ಕ – ಶನಿವಾರ ಕೊರೊನಾ ಹೊಸ ಪ್ರಕರಣ ಪತ್ತೆಯಿಲ್ಲ…

ಮಂಗಳೂರು: ಜಿಲ್ಲೆಯಲ್ಲಿ 25 ಮಂದಿಯ ಮಾದರಿಯನ್ನು ಪರೀಕ್ಷೆಗಾಗಿ ರವಾನಿಸಿದ್ದು ಇದರಲ್ಲಿ 15 ಜನರ ವರದಿ ಶನಿವಾರ ಬಂದಿದ್ದು ಎಲ್ಲವೂ ನೆಗೆಟಿವ್ ರಿಪೋರ್ಟ್ ಬಂದಿದೆ.
ನೆರೆಯ ಜಿಲ್ಲೆಯಾದ ಕಾಸರಗೋಡಿನಲ್ಲಿ ಶನಿವಾರ ಒಂದು ಹೊಸ ಪ್ರಕರಣ ಪತ್ತೆಯಾಗಿದ್ದು ಕೊಂಚ ಸಮಾಧಾನ ತಂದಿದೆ. ಕಾಸರಗೋಡಿನಲ್ಲಿ ಶುಕ್ರವಾರ ಒಂದೇ ದಿನ 34 ಪ್ರಕರಣ ಪತ್ತೆಯಾಗಿತ್ತು. ದ.ಕ ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 58,209 ಜನರನ್ನು ತಪಾಸಣೆ ಮಾಡಲಾಗಿದೆ. ಇಂದಿನವರೆಗೆ 3,164 ಮಂದಿಯನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಇನ್ನು ಜಿಲ್ಲೆಯಲ್ಲಿ 20 ಮಂದಿ 28 ದಿನಗಳ ಹೋಮ್ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 6 ಮಂದಿಯಲ್ಲಿ ಕೊರೊನಾ ಶಂಕಿತ ಪ್ರಕರಣಗಳು ಕಂಡು ಬಂದಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡುವುದನ್ನು ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.