ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು -“ನೀರಾವರಿಯಲ್ಲಿ ಬಾಷ್ಪೀಕರಣದ ಉಪಯುಕ್ತತೆ” ಕೈಪಿಡಿ ಬಿಡುಗಡೆ…

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗವು ರೈತರಿಗೆ ಹಾಗೂ ಸಂಶೋಧನಾ ನಿರತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ “ನೀರಾವರಿಯಲ್ಲಿ ಬಾಷ್ಪೀಕರಣದ ಉಪಯುಕ್ತತೆ” ಎನ್ನುವ ಕೃಷಿ ನೀರಾವರಿಗೆ ಸಂಬಂಧಪಟ್ಟ ತಾಂತ್ರಿಕ ಅಂಕಿ ಅಂಶಗಳ ಕೈಪಿಡಿಯನ್ನು ಬಿಡುಗಡೆಗೊಳಿಸಿದೆ.
ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ಸುಬ್ರಮಣ್ಯ ಭಟ್.ಟಿ.ಎಸ್ ಮತ್ತು ರವಿಕೃಷ್ಣ.ಡಿ.ಕಲ್ಲಾಜೆ ಇದನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತನೊಬ್ಬ ನೀರಾವರಿಯಲ್ಲಿ ಸ್ವಾವಲಂಬನೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಬೆಳೆಗಳ ನೀರಾವರಿಯ ಮಾಹಿತಿಗಳನ್ನೊಳಗೊಂಡ ಈ ಪುಸ್ತಕವು ಸಂಗ್ರಹಯೋಗ್ಯ ಎಂದರು. ಇದರ ಬಗ್ಗೆ ಸಂಶೊಧನೆಯನ್ನು ಮಾಡಿದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದರು.
ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಸಂದೀಪ್.ಜೆ.ನಾಯಕ್ ಮತ್ತು ಸಹಾಯಕ ಪ್ರಾಧ್ಯಾಪಕ ಪ್ರೊ. ಪ್ರಶಾಂತ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಡೆಸಿದ ಈ ಸಂಶೋಧನೆಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನಿಂದ 2018-19ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಟ ಸಂಶೋಧನಾ ಪ್ರಶಸ್ತಿ ದೊರಕಿತ್ತು. ಇದೇ ಸಂಶೋಧನಾ ವಿಷಯವನ್ನು ವಿಸ್ತೃತವಾಗಿ ವಿಶ್ಲೇಷಿಸಿದ ಪ್ರೊ. ಪ್ರಶಾಂತ ದತ್ತಾಂಶಗಳ ಸಂಗ್ರಹ ಮಾಡಿದ್ದಾರೆ.
ಈ ಸಂಶೋಧನೆಯಲ್ಲಿ ಆ ಪರಿಸರದಲ್ಲಿನ ಮಳೆ, ಮಣ್ಣಿನ ತೇವಾಂಶ, ಗಾಳಿಯ ವೇಗ, ಸೂರ್ಯನ ಬೆಳಕಿನ ತೀಕ್ಷ್ಣತೆ ಇತ್ಯಾದಿಗಳನ್ನು ಗಮನದಲ್ಲಿರಿಸಿಕೊಂಡು ನೀರಿನ ಬಾಷ್ಪೀಕರಣದ ಸಮೀಕರಣವನ್ನು ಕಂಡುಕೊಂಡಿದ್ದು, ಇದನ್ನು ಬಳಸಿ ಕೃಷಿಯ ನೀರಿನ ಆವಶ್ಯಕತೆಯನ್ನು ಅಂದಾಜಿಸಬಹುದು. ಪ್ರತಿಯೊಂದು ಕೃಷಿಗೂ ಬೇಕಾದ ನೀರಿನ ಪ್ರಮಾಣವನ್ನು ಕಂಡುಕೊಂಡು ಅದರಂತೆ ನೀರಾವರಿ ಪದ್ದತಿಯನ್ನು ಅಳವಡಿಸಿ ನೀರಿನ ಮಿತವ್ಯಯವನ್ನು ಸಾಧಿಸಬಹುದು.
ರೈತರಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಇದೊಂದು ಮಹತ್ವದ ದತ್ತಾಂಶ ಸಂಗ್ರಹವಾಗಿದ್ದು, ಆಸಕ್ತರು ಕಾಲೇಜಿನ ಸಿವಿಲ್ ವಿಭಾಗದಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಸಿವಿಲ್ ಇಂಜಿನಿಯರಿಂಗ್ ವಿಭಾಗವು ಸಮಾಜಮುಖೀ ಸಂಶೋಧನೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದೆ. ಪ್ರಸ್ತುತ ಕಡಿಮೆ ವೆಚ್ಚದ ಮನೆ ನಿರ್ಮಾಣ ಹಾಗೂ ಪುತ್ತೂರು ತಾಲೂಕಿನ ಭೂ ಬಳಕೆಯಲ್ಲಾಗುವ ವ್ಯತ್ಯಾಸ ಈ ವಿಷಯಗಳ ಬಗ್ಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಂಶೋಧನೆಯನ್ನು ನಡೆಸಲಾಗುತ್ತಿದೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button