ಸುಳ್ಯದ ಯುವಕನಿಗೆ ದುಬೈನಲ್ಲಿ ಹತ್ತು ಲಕ್ಷ ರೂಪಾಯಿಗಳ ಲಾಟರಿ…

ಸುಳ್ಯ: ಸುಳ್ಯದ ಜಟ್ಟಿಪಳ್ಳದ ಮಹಮ್ಮದ್ ರಫೀಕ್ ಎಂಬವರಿಗೆ ದುಬೈ ಮೂಲದ ಆನ್ ಲೈನ್ ಬಿಗ್ ಟಿಕೆಟ್ ಲಾಟರಿ ಬಂದಿದೆ ಎಂದು ತಿಳಿದುಬಂದಿದೆ.
ಸುಳ್ಯದ ಯುವಕನಿಗೆ ದುಬೈ ಮೂಲದ ಆನ್ ಲೈನ್ ಬಿಗ್ ಟಿಕೆಟ್ ಲಾಟರಿ ಮೂಲಕ 50,000 ದಿರಾಮ್ಸ್ ಅಂದರೆ ಸುಮಾರು 10 ಲಕ್ಷ ರೂಪಾಯಿ ಬಹುಮಾನ ಬಂದಿದೆ . ಕಳೆದ ಹಲವು ವರ್ಷಗಳಿಂದ ಯುವಕ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ . ಈ ಹಿಂದೆಯೂ ಸುಳ್ಯದ ಯುವಕನೋರ್ವನಿಗೆ ದೊಡ್ಡ ಮೊತ್ತದ ಬಹುಮಾನ ಬಂದಿತ್ತು.