ಜೆಸಿಬಿ , ಹಿಟಾಚಿ ಬಾಡಿಗೆ ಏರಿಕೆ ನಿರ್ಧಾರ, ಗಾಯದ ಮೇಲೆ ಬರೆ ಎಳೆದಂತೆ – ಎಂ ವೆಂಕಪ್ಪ ಗೌಡ…
ಸುಳ್ಯ: ಜನಸಾಮಾನ್ಯರು ಈಗಾಗಲೇ ಕೊರೋನ ಮಹಾಮಾರಿ ವೈರಸ್ ಗೆ ತತ್ತರಿಸಿ ಹೋಗಿದ್ದು ಇದೇ ಸಂದರ್ಭದಲ್ಲಿ ಜೆಸಿಬಿ, ಹಿಟಾಚಿ ವಾಹನ ಚಾಲಕ ಮಾಲಕ ಸಂಘದವರು ಸಭೆಯನ್ನು ನಡೆಸಿ ಬಾಡಿಗೆ ಹೆಚ್ಚಿಗೆ ಮಾಡಲು ನಿರ್ಧಾರ ಮಾಡಿರುವಂತದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ವಾಸ್ತವವಾಗಿ ಡಿಸೇಲ್ ಹಾಗೂ ಬಿಡಿ ಭಾಗಗಳ ದರ ಏರಿಕೆ ಕಳೆದ ಐದಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಆದರೆ ಆ ಬಗ್ಗೆ ಯಾವುದೇ ಧ್ವನಿಯನ್ನು ಎತ್ತಲು ಸಾಧ್ಯವಾಗದ ಜನ ಸಾಮಾನ್ಯನು ಕೊರೋನ ಮಹಾಮಾರಿಯಿಂದ ತಮ್ಮ ಜೀವನವನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಮಣಿಸಿದೆ. ಎಲ್ಲವನ್ನು ಸರಿ ಮಾಡಬೇಕಾದ ಸರಕಾರಗಳು ಬಾಯಿ ಮಾತಿನಲ್ಲೇ ಜನ ಸಾಮಾನ್ಯನ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಾ ಬರುತ್ತಿದ್ದು, ಜನ ಸಾಮಾನ್ಯನ ಬದುಕು ದುಸ್ತರವಾಗಿದೆ. ಈ ಕಾಲಘಟ್ಟದಲ್ಲಿ ಜನ ಸಾಮಾನ್ಯರಿಗೆ ಸಹಾಯ ಮಾಡಬೇಕಾದ ಸ್ಥಾನದಲ್ಲಿದ್ದವರು ಸರಕಾರದ ವಿರುದ್ದ ಹೋರಾಟ ಮಾಡದೇ , ಕೊರೋನ ಮಹಾಮಾರಿಯಿಂದ ಸಂಕಷ್ಟಕ್ಕೀಡಾದ ಜನರ ಮೇಲೆಯೇ ಬಾಡಿಗೆ ಏರಿಸಿ ಸವಾರಿ ಮಾಡಿದಂತಾಗಿದೆ. ಈ ರೀತಿಯ ಕ್ರಮವನ್ನು ಜನ ಸಾಮಾನ್ಯರು ಒಪ್ಪಲಾರರು. ಎಂದು ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.