ಕೊಕ್ಕೊ ತಂದ ಕೃಷಿಕರನ್ನು ವಾಪಸ್ ಕಳುಹಿಸಿದ್ದು ಸರಿಯಲ್ಲ : ಯೂತ್ ಕಾಂಗ್ರೆಸ್…
ಸುಳ್ಯ : ಸುಳ್ಯದ ಕ್ಯಾಂಪ್ಕೊ ಶಾಖೆಗೆ ಕೊಕ್ಕೊ ತಂದ ಕೃಷಿಕರಿಂದ ಕೊಕ್ಕೊ ಖರೀದಿಸದೇ ವಾಪಸ್ ಕಳುಹಿಸಿದ ಕ್ರಮ ಖಂಡನೀಯ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೊ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು “ಕ್ಯಾಂಪ್ಕೊ ಸಂಸ್ಥೆ ಕೃಷಿಕರ ಹಿತ ಕಾಪಾಡಬೇಕಾಗಿದ್ದು, ಇಂದು ದೂರ ದೂರದಿಂದ ವಾಹನ ಮಾಡಿಕೊಂಡು ತಾವು ಬೆಳೆದ ಕೊಕ್ಕೊ ಮಾರಾಟಕ್ಕೆ ಕೃಷಿಕರು ತಂದಿದ್ದು ಅದನ್ನು ಖರೀದಿ ಮಾಡದೇ ಕ್ಯಾಂಪ್ಕೊ ಸಂಸ್ಥೆ ಕೃಷಿಕರನ್ನು ವಾಪಸ್ ಕಳುಹಿಸಿ ಕೃಷಿಕರಿಗೆ ಅವಮಾನ ಎಸಗಿದೆ. ಮುಂದಿನ ಸಲವೂ ಸಂಸ್ಥೆ ಇದೇ ಪ್ರವೃತ್ತಿ ಮುಂದುವರಿಸಿದರೆ ಯೂತ್ ಕಾಂಗ್ರೆಸ್ ಕೃಷಿಕರ ಪರ ನಿಂತು ಪ್ರತಿಭಟನೆ ನಡೆಸುತ್ತದೆ. ಒಂದು ವೇಳೆ ಸಂಸ್ಥೆಯವರು ಖರೀದಿಸಲು ಸಾಧ್ಯವಿಲ್ಲ ಎಂದಾದರೆ ಒಂದೆರಡು ದಿನಕ್ಕೆ ಮೊದಲೇ ಕೃಷಿಕರಿಗೆ ಮಾಹಿತಿ ನೀಡಬೇಕು. ಕೊಕ್ಕೊ ತಂದ ಬಳಿಕ ವಾಪಸ್ ಕಳಿಸುವುದು ಸರಿಯಲ್ಲ ಎಂದು ಸಿದ್ದೀಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.