ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ಸುರೇಶ ವಿ ಅವರಿಗೆ ಡಾಕ್ಟರೇಟ್ ಪದವಿ….
ಸುಳ್ಯ: ಇಲ್ಲಿನ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಪ್ರೊ. ಸುರೇಶ ವಿ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಡಿಸೈನ್ ಆಂಡ್ ಇಂಪ್ಲಿಮೆಂಟೇಷನ್ ಆಫ್ ಸೊಲ್ಯೂಷನ್ ಟು ಸಮ್ ಆಫ್ ದಿ ನೆಟ್ ವರ್ಕಿಂಗ್ ಪ್ರಾಬ್ಲೆಮ್ಸ್ ಇನ್ ಹೆಟಿರೋಜೀನಿಯಸ್ ವಯರ್ ಲೆಸ್ ನೆಟ್ ವರ್ಕ್ಸ್ ಎನ್ನುವ ವಿಷಯದ ಬಗ್ಗೆ ಅವರು ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದರು.ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ.ಶಂಕರಯ್ಯ ಅವರ ಮಾರ್ಗದರ್ಶನದಲ್ಲಿ ಪ್ರೊ. ಸುರೇಶ ವಿ ಸಂಶೋಧನೆ ನಡೆಸಿದ್ದಾರೆ.
ಪ್ರೊ. ಸುರೇಶ ವಿ ಅವರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಾತೆಗಾಲ ಗ್ರಾಮದ ಟಿ.ವೆಂಕಟೇ ಗೌಡ ಮತ್ತು ರಾಜಮ್ಮ ದಂಪತಿಯ ಪುತ್ರ.