ಕೋವಿಡ್-19 ಮಹಾಮಾರಿ ಹತೋಟಿಗೆ ತರುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ- ಟಿ.ಎಂ.ಶಾಹೀದ್ ತೆಕ್ಕಿಲ್…

ಸುಳ್ಯ: ಪ್ರಪಂಚದಾದ್ಯಂತ ಹಬ್ಬುತ್ತಿರುವ ಮಹಾಮಾರಿ ಸಾಂಕ್ರಾಮಿಕ ರೋಗ ಕೋವಿಡ್ -19 ರ ವಿರುಧ್ದ ಹೋರಾಡಲು ರಾಜ್ಯ ಸರಕಾರಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ.ಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದವರು ಸಂಪೂರ್ಣ ಸಹಕಾರ ನೀಡಿದ್ದರೂ ರಾಜ್ಯ ಸರಕಾರ ಮಾತ್ರ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ. ಅಲ್ಲದೆ ಜನರ ಪ್ರಾಣದ ಮೇಲೆ ಚೆಲ್ಲಾಟವಾಡುತ್ತಿದೆ ಎಂದು ಕೆ.ಪಿ.ಸಿ.ಸಿ. ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಆರೋಪಿಸಿದ್ದಾರೆ .
ಸರಕಾರ ಪ್ರಾಥಮಿಕ ಹಂತದಲ್ಲಿ ರೋಗವನ್ನು ನಿಯಂತ್ರಿಸಲು ವಿಫಲವಾಗಿದ್ದು 4 ತಿಂಗಳು ಸರಕಾರ ಬೇಜವಾಬ್ದಾರಿಯಿಂದ ವರ್ತಿಸಿದ್ದರು ಕೂಡ ಕಾಂಗ್ರೆಸ್ ಪಕ್ಷ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಿದೆ. ರಾಜ್ಯ ಸರಕಾರ ಮಾತ್ರ ರೋಗಿಗಳು ಹೆಚ್ಚಾದಂತೆ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ,ಉಪಕರಣಗಳ ಕೊರತೆ ಮುಂತಾದ ಪ್ರಾಥಮಿಕ ಸೌಲಭ್ಯಗಳನ್ನು ನೀಡಲು ವಿಫಲವಾಗಿದೆ. ಜನರು ಐ.ಟಿ., ಬಿ.ಟಿ.ಯಂತಹ ವಾಣಿಜ್ಯ ನಗರ ಬೆಂಗಳೂರನ್ನು ತೊರೆಯುತ್ತಿದ್ದಾರೆ. ಸರಕಾರದಲ್ಲಿರುವ 8 ಸಚಿವರುಗಳು ಮತ್ತು ಅಧಿಕಾರಿಗಳು ಪತ್ರಿಕೆಗಳಲ್ಲಿ ,ಮಾಧ್ಯಮಗಳಲ್ಲಿ ಒಂದೊಂದು ಹೇಳಿಕೆಗಳನ್ನು ನೀಡುತ್ತಾ ಪ್ರಚಾರವನ್ನು ಗಿಟ್ಟಿಸುವುದರಲ್ಲಿ ಮಗ್ನವಾಗಿದ್ದಾರೆ. ಜನರ ಬಗ್ಗೆ ಯಾವುದೆ ಕಾಳಜಿ ಇಲ್ಲದೆ ಬಂಡವಾಳ ಶಾಹಿ ಮತ್ತು ಶ್ರೀಮಂತರ ಪರ ಇರುವ ಸರಕಾರವಾಗಿದೆ . ಸಾಮಾನ್ಯ ಜನರ ತುರ್ತು ಆರೋಗ್ಯ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯದಲ್ಲಿ ಸಾಮಾನ್ಯ ಜನರು ಮತ್ತು ಬಡವರು ಆರೋಗ್ಯ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಹೈಟೆಕ್ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯುವ ಶ್ರೀಮಂತರನ್ನು ನೋಡಿ ಅಧಿಕಾರಿಗಳು ಮತ್ತು ಸಚಿವರು ರೋಗ ಹತೋಟಿಯಲ್ಲಿ ಇದೆ ಎಂದು ಹೇಳಿಕೆಗಳನ್ನು ನೀಡುತ್ತಿರುವುದೇ ಹೊರತು ಬಡವರು, ಮಧ್ಯಮ ವರ್ಗದವರು ಚಿಕಿತ್ಸೆ ದೊರೆಯದೆ ದಿನಾ ಸಾವುಗೀಡಾಗುತ್ತಿರುವರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಮತ್ತು ರೋಗದಿಂದಾಗಿ ಜನರು ಭಯಬೀತರಾಗಿದ್ದು ಸರಕಾರದ ವಿರುಧ್ದ ರೋಸಿ ಹೋಗಿದ್ದಾರೆ . ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ಅವರ ಸಚಿವರುಗಳು ಕಮಿಷನ್ ದಂಧೆಯಲ್ಲಿ ಕಾಲಹರಣ ಮಾಡುವುದಲ್ಲದೆ ಪಿ.ಪಿ.ಇ.ಕಿಟ್. ಸ್ಯಾನಿಟೈಸರ್ ,ಗ್ಲೌಸ್, ಮಾಸ್ಕ್, ಔಷಧಿ ಗಳು,ಬೆಡ್ ಗಳು,ವೆಂಟಿಲೇಟರ್, ಮತಿತ್ತರ ಉಪಕರಣಗಳ ಖರೀದಿಯಲ್ಲಿ 10ಪಟ್ಟು ಹೆಚ್ಚು ಹಣವನ್ನು ನೀಡುವ ದಂಧೆಯಲ್ಲಿ ಮಗ್ನರಾಗಿದ್ದಾರೆ. ಇವರು ಮಾನವೀಯತೆ ನೆಲೆಯಲ್ಲಿ ಕೆಲಸ ಮಾಡದೆ ಇರುವುದರಿಂದ ಯಡಿಯೂರಪ್ಪನವರ ಸರಕಾರ ಸಂಪೂರ್ಣ ವಿಫಲವಾಗಿದೆ.
ರಾಜ್ಯ ಸರಕಾರ ಖಾಸಗಿ ವೈಧ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳನ್ನು ಹತೋಟಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದ್ದು ಇವರ ಮೇಲೆ ಯಾವುದೆ ಕ್ರಮ ಕೈಗೊಳ್ಳದೆ ಸರಕಾರ ಸಂಪೂರ್ಣ ವೈಫಲ್ಯ ಹೊಂದಿದೆ ಎಂದು ಟಿ.ಎಂ.ಶಾಹೀದ್ ರವರು ಟೀಕಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಆರೋಗ್ಯ ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಜನರನ್ನು ಲೂಟಿ ಹೊಡೆಯಲು ಸರಕಾರದ ಕೆಲವು ಸಚಿವರುಗಳು ಕೂಡ ಪರೋಕ್ಷ ಬೆಂಬಲವನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಸಚಿವರ ಮೇಲೆ ಮತ್ತು ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ದಿನಂಪ್ರತಿ ಮುಖ್ಯಮಂತ್ರಿಗಳು ನಡೆಸುವ ಸಭೆಗಳು,ನಡಾವಳಿಗಳು ಕಾರ್ಯಗತವಾಗುತ್ತಿಲ್ಲ. ಅದಕ್ಕೆ ಮುಖ್ಯಮಂತ್ರಿಗಳು ದಿನಂಪ್ರತಿ ನೀಡುತ್ತಿರುವ ಹೇಳಿಕೆಗಳ ನಿದರ್ಶನವಾಗಿದೆ.ರಾಜ್ಯದಲ್ಲಿ ಸಾವಿಗೀಡಾದ ಜನರ ಹೆಸರಲ್ಲಿ ಹಣ ಕೊಳ್ಳೆ ಹೊಡೆಯುತ್ತಿರುವುದು ಅತ್ಯಂತ ದುಃಖಕರವಾದ ವಿಷಯವಾಗಿದೆ ಎಂದು ಕೆ.ಪಿ.ಸಿ.ಸಿ. ಯ ಮಾಜಿ ಕಾರ್ಯದರ್ಶಿ ಹಾಗು ಕೊಡಗು ವಿರಾಜಪೇಟೆಯ ಬ್ಲಾಕ್ ಕಾಂಗ್ರೆಸ್ ನ ಉಸ್ತುವಾರಿ ಟಿ.ಎಂ.ಶಾಹೀದ್ ತೆಕ್ಕಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button