ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಸಂತ್ರಸ್ತರಿಗೆ ಎ ಎಸ್ ಪೊನ್ನಣ್ಣ ಅಭಯ…
ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಕಾಂಗ್ರೆಸ್ ಪಕ್ಷದ ನಾಯಕ ಅಬುಸಾಲಿ ಗೂನಡ್ಕ ರವರ ಮನೆಗೆ ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕು ಘಟಕದ ಅಧ್ಯಕ್ಷ, ಕರ್ನಾಟಕ ಸರ್ಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ ಎಸ್ ಪೊನ್ನಣ್ಣ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸಂಪಾಜೆ ಗ್ರಾಮದ ಗೂನಡ್ಕ ದರ್ಕಾಸಿನ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದಿಂದ ಸುಳ್ಯ ಅರಣ್ಯಇಲಾಖೆ ಯವರು ಪ್ರಾದೇಶಿಕ ಅರಣ್ಯ ವಲಯ ತೊಡಿಕಾನ ಮೀಸಲು ಅರಣ್ಯ ಕ್ಷೇತ್ರ- 11ಸರ್ವೆ ನಂಬ್ರ 129 ರಲ್ಲಿ ಹಲವಾರು ವರುಷಗಳಿಂದ ಮನೆ ಕಟ್ಟಿ ಕೃಷಿ ಮಾಡುತ್ತಿರುವ ಬಡವರಿಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಹಾಜರಾಗಲು ನೊಟೀಸ್ ಜ್ಯಾರಿ ಮಾಡಿದ ಬಗ್ಗೆ ಗಮನ ಸೆಳೆದು ಅನ್ಯಾಯ ಆಗಿರುವ ಬಗ್ಗೆ ಟಿ ಎಂ ಶಾಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಅಬುಸಾಲಿ ಗೂನಡ್ಕ, ಉಮ್ಮರ್ ದರ್ಕಾಸ್, ಮುತ್ತಲಿಬ್ ದರ್ಕಾಸ್ ಗೂನಡ್ಕ, ಸಫೀರ್ ದರ್ಕಾಸ್ ಗೂನಡ್ಕ ಗಮನ ಸೆಳೆದರು.
ಅಲ್ಲದೆ ಅಬುಸಾಲಿಯವರು ಪೊನ್ನಣ್ಣ ಅವರು ಊರಿಗೆ ಹಾಗೂ ವೈಯುಕ್ತಿಕವಾಗಿ ಅವರಿಗೆ ಸಹಾಯ ಮಾಡಿದ್ದಕ್ಕೆ ಬಗ್ಗೆ ಕೃತಜ್ಞತೆ ಸಲ್ಲಿಸಿ ಶಾಲು ಹೊದಿಸಿ ಶುಭ ಹಾರೈಸಿದರು. ಮನವಿಗೆ ಸ್ಪಂದಿಸಿದ ಪೊನ್ನಣ್ಣ ಅವರು ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ವಾದಿಸುವುದಾಗಿ ಭರವಸೆ ನೀಡಿದರು ಅಗತ್ಯ ದಾಖಲೆಗಳನ್ನು ಕಚೇರಿಗೆ ತಲುಪಿಸುವಂತೆ ಅಬುಸಾಲಿ ಗೂನಡ್ಕ ಹಾಗೂ ಉಮ್ಮರ್ ದರ್ಕಾಸ್ ರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೊಲ್ಯದ ಗಿರೀಶ್ , ಇಸ್ಮಾಯಿಲ್ ನಾಪೋಕ್ಲು, ಶ್ರೀಧರನ್ ನಾಯರ್ ಸೂರಜ್ ಹೊಸೂರು, ಚಂದ್ರ ಶೇಖರ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಎಸ್ ಕೆ ಹನೀಫ್ ಸಂಪಾಜೆ, ಗೂನಡ್ಕ ಮಸೀದಿಯ ಅಧ್ಯಕ್ಷರಾದ ಅಬ್ದುಲ್ಲ ಕೊಪ್ಪತಕಜೆ, ಸಿ ಎಂ ಅಬ್ದುಲ್ಲ ಚೇರೂರ್ ದರ್ಕಾಸ್, ಅಲ್ಪ ಸಂಖ್ಯಾತರ ಕಾಂಗ್ರೇಸ್ ಅಧ್ಯಕ್ಷರಾದ ರಹೀಂ ಬೀಜದಕಟ್ಟೆ , ಹಾರಿಸ್ ಗೂನಡ್ಕ, ಸಿದ್ದಿಕ್, ಡಿ ಆರ್ ಖಾದರ್, ಎನ್ ಎಸ್ ಯು ಐ ಮುಖಂಡ ಪಿ ಯು ಉಬೈಸ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.