ಆದ್ಯಪಾಡಿ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ- ಬ್ರಹ್ಮಕಲಶ, ನಾಗಬ್ರಹ್ಮಮಂಡಲ ಪೂರ್ವಭಾವಿ ಸಭೆ….
ಧಾರ್ಮಿಕತೆಯಿಂದ ಪುಣ್ಯಪ್ರಾಪ್ತಿ - ಉಳಿಯ ದೇವು ಮೂಲ್ಯಣ್ಣ...
ಮಂಗಳೂರು: ಧಾರ್ಮಿಕ ಹಿನ್ನೆಲೆ ಹೊಂದಿರುವ ಅವಿಭಜಿತ ಜಿಲ್ಲೆಯಲ್ಲಿ ಗಾಣಿಗ ಸಮುದಾಯಕ್ಕೆ ಹಲವೆಡೆ ದೈವ ದೇವರ ಆರಾಧನೆ ಮಾಡುವ ಅವಕಾಶ ದೊರೆತಿರುವುದು ಪೂರ್ವಜನ್ಮದ ಪುಣ್ಯದ ಫಲ ಎಂದು ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಹೇಳಿದ್ದಾರೆ.
ಇಲ್ಲಿನ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮತ್ತು ನಾಗಬ್ರಹ್ಮ ಮಂಡಲೋತ್ಸವ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವಳದ ಧರ್ಮದರ್ಶಿ ಮೋನಪ್ಪ ಮೇಸ್ತ್ರಿ ಅಧ್ಯಕ್ಷತೆ ವಹಿಸಿದ್ದರು.
ಮುಂಬೈ ಸಾಫಲ್ಯ ಯಾನೆ ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ ರಾಯಿ, ಮಾಜಿ ಅಧ್ಯಕ್ಷ ಓಂಪ್ರಕಾಶ್ ರಾವ್, ಮಾಜಿ ಕಾರ್ಯದರ್ಶಿ ಭಾಸ್ಕರ ಅಮೀನ್, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ಬಂಟ್ವಾಳ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್.ಮಾವೆ ಶುಭ ಹಾರೈಸಿದರು.
ಪ್ರಮುಖರಾದ ಸಂಜೀವ ಅಡ್ಯಾರು, ಭಾಸ್ಕರ ಎಡಪದವು , ಪದ್ಮನಾಭ ಕಟೀಲು, ವೆಂಕಟೇಶ್ ಕದ್ರಿ, ಪ್ರೇಮಾನಂದ ಸಾಲ್ಯಾನ್, ಮೋಹನ್ ಕೆ.ಶ್ರೀಯಾನ್ ರಾಯಿ, ಡಾ.ರವೀಂದ್ರ ಕಂದಾವರ, ರತಿಕಾ ಶ್ರೀನಿವಾಸ್ ಮುಂಬೈ, ಕೇಶವ ಪೊಳಲಿ, ವಿವೇಕಾನಂದ ವಾಮಂಜೂರು ಮತ್ತಿತರರು ಇದ್ದರು. ದೇವಳದ ಟ್ರಸ್ಟಿ ರಾಜೇಶ್ ಗಾಣಿಗ ಪ್ರಾಸ್ತಾವಿಕ ಮಾತನಾಡಿದರು. ತಿಲಕ್ ಶೆಟ್ಟಿ ಪೆರಾರ ಸ್ವಾಗತಿಸಿ, ವಂದಿಸಿದರು.