ಕೋವಿಡ್-19 … ಕಾಲೇಜ್….

ಕೋವಿಡ್-19 … ಕಾಲೇಜ್….
ಬಿಟ್ಟ ಹೋಗ ಬೇಡಾ ನೀ ನನ್ನ ಗೆಳೆಯ
 ನಿಮ್ಮೂರ ಸಂಕ್ರಾಂತಿ ಹಬ್ಬಕ ಕರಿಯಾಕ
 ಬರತಿನಿ ಅಂತ ಹೇಳಿ ನೀ ಯಾಕ
 ಬರಲಿಲ್ಲ ನನ್ನ ಗೆಳೆಯ…
ನೀ ಬರತಿನಿ ಅಂತ ನಾ ತಿಳಕೊಂಡ
 ಕುಂತೆನಿ ನಮ್ಮೂರ ಅಗಸಿ ಬಾಗಿಲದಾಗ
 ನೀ ಬರಲಿಲ್ಲ ನನ್ನ ಕರಿಲಾಕ
 ನಿನಗಾಗಿ ಕಾದಿರುವೆ ಬಾರಾ ನನ್ನ ಗೆಳೆಯ..
ಗೆಳೆಯ ನಿಮ್ಮೂರ ಸಂಕ್ರಾಂತಿ ಹಬ್ಬಕ
 ನನಗ ಉಡುಗೊರೆಯೊಂದ ತರತಿನಿ
 ಅಂತಾ ಹೇಳಿ ನೀ ಯಾಕ ಬರಲಿಲ್ಲ ಕರಿಲಾಕ
 ಬಾರಾ ನನ್ನ ಪ್ರೀತಿಯ ಗೆಳೆಯ…
ಕೋವಿಡ್-19 ಹೋಗೇತಿ
 ಕಾಲೇಜ್ ಶುರುವಾಗೇತಿ ಗೆಳೆಯ
 ಕಾಲೇಜ್ ಗೆ ಆದರೂ ನೀ ಬಾರ ನನ್ನ ಗೆಳೆಯ
 ನಿನ್ನ ನೋಡಿದರ ನಂಗ ಸಂಕ್ರಾಂತಿ ಸಿಹಿ
 ಸಿಕ್ಕಂಗ ನನ್ನ ಪ್ರೀತಿಯ ಗೆಳೆಯ…
ರಚನೆ:
 ಬಸವರಾಜ ಎಸ್. ಬಾಗೇವಾಡಿಮಠ.
 ವಿಳಾಸ: ರಂಗನಾಥ ನಗರ: ರಾಣೆಬೇನ್ನೂರು:
 581115. ಜಿಲ್ಲಾ: ಹಾವೇರಿ.
 ಮೊ ನಂ: 9611381039


 
 




