ಸುಳ್ಯ ನಗರದಲ್ಲಿ ಕೊರೊನ ನಿರ್ಲಕ್ಷ್ಯ ಬೇಡ – ತಾಲೂಕು ಆಡಳಿತದಿಂದ ಸೂಕ್ತ ಕ್ರಮಕ್ಕೆ ವೆಂಕಪ್ಪ ಗೌಡ ಆಗ್ರಹ…

ಸುಳ್ಯ: ದೇಶ – ರಾಜ್ಯದಂತೆ ಇದೀಗ ಜಿಲ್ಲಾ ಹಾಗು ತಾಲೂಕು ಮಟ್ಟದಲ್ಲಿ ಕೂಡ ಕೊರೊನ ಮಹಾಮಾರಿ ಜಾಸ್ತಿಯಾಗುತ್ತಿದೆ. ಅದೇ ರೀತಿ ಸುಳ್ಯದಲ್ಲೂ ಕೂಡ ವರದಿಯಾಗುತ್ತಿರೋದು ಸುಳ್ಯ ನಗರದ ಜನತೆಯನ್ನು ಆತಂಕಕ್ಕೀಡುಮಾಡಿದೆ. ಇದೀಗ ಕೇವಲ ಸೋಂಕಿತರು ಮಾತ್ರವಲ್ಲದೆ ಮರಣ ಕೂಡ ಸಂಭವಿಸಿದೆ. ಅದರೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾದ ತಾಲೂಕು ಆಡಳಿತಕ್ಕೆ ಒಬ್ಬರು ಮರಣಪಟ್ಟು ಅವರಿಗೆ ಪಾಸಿಟಿವ್ ಆದ ವಿಚಾರವೇ ಶನಿವಾರ ಮದ್ಯಾಹ್ನ ತನಕ ತಿಳಿದಿಲ್ಲ. ಈ ಬಗ್ಗೆ ಸಂಭಂದಪಟ್ಟ ವಾರ್ಡನ ಸದಸ್ಯರ ಫೋನ್ ಕಾಲ್ ಅಟೆಂಡ್ ಮಾಡೋ ಆಸಕ್ತಿಯಿಲ್ಲ. ಅಲ್ಲದೆ ಮರಣ ಹೊಂದಿದ ಮನೆ ಸುತ್ತಮುತ್ತ ಸ್ಯಾನಿಟೈಸ್ ಮಾಡುವ ಗೋಜಿಗೆ ಈ ತನಕ ಹೋಗೋದಿಲ್ಲ ಎಂದಾದರೆ ಏನರ್ಥ?. ನಮ್ಮ ಸುಳ್ಯ ಕೂಡ ದೂರದ ಬೆಂಗಳೂರು , ಬಳ್ಳಾರಿ ,ಯಾದಗಿರಿ ಆಗಬೇಕೆ? ಎಂಬ ಅತಂಕ ಜನರಲ್ಲಿ ಮೂಡಿರುವುದು ಅಂತೂ ಸತ್ಯ. ಸುಳ್ಯದಲ್ಲಿ ಕೇವಲ ಕೊರೊನ ಮಾತ್ರವಲ್ಲ, ಇದೀಗ ಡೆಂಗೀ ಕೂಡ ಪ್ರಾರಂಭ ಆಗಿದೆ. ನಮ್ಮ ದೇಶದಲ್ಲಿಯಂತೂ ಕೊರೊನ ಪ್ರಾರಂಭದ ದಿನಗಳಲ್ಲಿದ್ದ ಉತ್ಸಾಹ ಸರಕಾರಗಳಲ್ಲಿ , ಅಧಿಕಾರಿಗಳಲ್ಲಿ , ರಾಜಕಾರಣಿಗಳಲ್ಲಿ , ಜನಸಾಮಾನ್ಯರಲ್ಲಿ ಅದರಲ್ಲೂ ಬಿಜೆಪಿ ಕಾರ್ಯಕರ್ತರಲ್ಲಿ ಸಂಪುರ್ಣ ಮಾಯವಾಗಿದೆ. ದೇಶದಲ್ಲಿ ಸಿಂಗಲ್- ಡಬಲ್ ಡಿಜಿಟ್ ಕೊರೊನ ಸೋಂಕಿತರಿದ್ದಾಗ ನಮ್ಮ ಪ್ರಧಾನಿ ದೇಶದ ಅರ್ಥಿಕತೆಗಿಂತ ದೇಶದ ಜನರ ಜೀವ ಮುಖ್ಯ ಅಂದರು. ಅದಕ್ಕೆ ದೇಶದ ಜನರು ಚಪ್ಪಾಳೆ ತಟ್ಟಿದರು , ಜಾಗಟೆ ಬಾರಿಸಿದರು, ದೀಪ ಉರಿಸಿದರು. ಕೆಲವು ಕಡೆ ಬಿಜೆಪಿ ಕಾರ್ಯಕರ್ತರಂತೂ ಅದೊಂದು ತಮ್ಮ ಪಕ್ಷದ ಕಾರ್ಯಕ್ರಮವೆಂಬಂತೆ ಬಿಂಬಿಸಿದರು. ಕೊರೊನ ವಾರಿಯರ್ಸ್ ಬದಲು ಮೋದಿಜಿ ಗೆ ಜೈಕಾರ ಹಾಕಿದರು ಮತ್ತು ನಮ್ಮ ದೇಶಕ್ಕೆ ಕೊರೊನ ಸೊಂಕು ಬರುವ ಚಾನ್ಸೇ ಇಲ್ಲ, ಅವೆಲ್ಲವನ್ನು ನಮ್ಮ ಅಡಳಿತ ದೇಶಕ್ಕೆ ಪ್ರವೇಶದ ಮೊದಲೇ ಹಿಮ್ಮೆಟ್ಟಿಸುತ್ತದೆ ಎಂದೆಲ್ಲಾ ಹೇಳಿಕೊಂಡರು. ಮಾರ್ಚ ತಿಂಗಳಲ್ಲಿ ಹನ್ನೊಂದು -ಹನ್ನೆರಡನೇ ಸ್ಥಾನದಲ್ಲಿದ್ದ ನಮ್ಮ ದೇಶ ಈಗ ಪ್ರಪಂಚದಲ್ಲಿ ಆರು ಲಕ್ಷದ ಅರುವತ್ತು ನಾಲ್ಕು ಸಾವಿರ ದೊಂದಿಗೆ ಪ್ರಪಂಚದ ಸೊಂಕಿತರ ಪಟ್ಟಿಯಲ್ಲಿ 3 ನೇ ಸ್ಥಾನದತ್ತ ಕಾಲಿಡುತ್ತಿದ್ದೇವೆ . ರಾಜ್ಯದಲ್ಲಿ ಸತ್ತವರ ಅಂತ್ಯಕ್ರಿಯೆಯಂತೂ ಸತ್ತ ಪ್ರಾಣಿಗಳಿಗಿಂತಲೂ ಕಡೆಯಾಗಿದೆ .ನಮ್ಮ ರಾಜ್ಯದ ಸಾವಿನ ಹಾಗೂ ಸೋಂಕಿತರ ಅಂಕಿಸಂಖ್ಯೆಗಳು ಮಹಾರಾಷ್ಟ್ರ, ಡೆಲ್ಲಿ ಗುಜರಾತ್ ,ತಮಿಳುನಾಡು ರಾಜ್ಯಗಳೊಂದಿಗೆ ಸೇರ್ಪಡೆಯತ್ತ ಸಾಗುತ್ತಿದೆ. ಈ ಬಗ್ಗೆ ವಿರೋಧ ಪಕ್ಷದ ಸ್ಥಾನದ ನೆಲೆಯಲ್ಲಿ ಕಾಂಗ್ರೆಸ್ ಮಾತಾಡಿದರೆ ನಮ್ಮ ಮೇಲೇನೆ ಇಲ್ಲಸಲ್ಲದ ಆರೋಪಗಳನ್ನು ಸರಕಾರಗಳು ಮಾಡುವುದಲ್ಲದೆ ತಮ್ಮ ವೈಫಲ್ಯವನ್ನು ಮುಚ್ಚಿಹಾಕುವರೇ ಈ ದೇಶದ ಜನರ ಗಮನವನ್ನು ಮಾಮೂಲಿಯಂತೆ ಪಾಕಿಸ್ತಾನ ಹಾಗು ಚೀನದ ಕಡೆಗೆ ಬೆರಳು ತೋರಿಸಿ ಕೈತೊಳೆದುಕೊಳ್ಳುವ ಕೆಲಸವನ್ನು ಮಾಡುತ್ತಿರುವುದು ಈ ದೇಶದ ಜನತೆಗೆ ಮಾಡುತ್ತಿರುವ ಮೋಸ ಎಂದರೆ ತಪ್ಪಾಗುತ್ತದೆಯಾ ? ಹಾಗಾಗಿ ಇವೆಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ತಾಲೂಕು ಆಡಳಿತ ಎಚೆತ್ತುಕೊಳ್ಳಬೇಕು ಎಂಬುದಾಗಿ ಸುಳ್ಯ ನಗರ ಪಂಚಾಯತ್ ಸದಸ್ಯ ಯಂ ವೆಂಕಪ್ಪ ಗೌಡ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button