ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ – ಮೂರನೇ ದಿನದ ಧರ್ಮಸಭೆ…
ಬಂಟ್ವಾಳ: ಸಜಿಪನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ನೂತನವಾಗಿ ಶಿಲಾಮಯವಾಗಿ ಪುನರ್ನಿರ್ಮಾಣ ಗೊಂಡು ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾಮಹೋತ್ಸವದ ಮೂರನೇ ದಿನದ ಧರ್ಮಸಭೆಯಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠ ಅವರು ದೀಪ ಬೆಳಗಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ಪ್ರವಚನವನ್ನು ಶ್ರೀ ಕೃಷ್ಣಪ್ರಸಾದ್ ಮುನಿಯಂಗಳ ವಾಸ್ತು ಶಾಸ್ತ್ರಜ್ಞರು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್ ವಹಿಸಿದ್ದರು. ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಬೆಂಗಳೂರು ಇದರ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರು, ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು, ಶ್ರೀಮತಿ ಶಕುಂತಳಾ ಟಿ ಶೆಟ್ಟಿ ಮಾಜಿ ಶಾಸಕರು ಪುತ್ತೂರು, ಸುದರ್ಶನ್ ಮೂಡಬಿದ್ರೆ ಅಧ್ಯಕ್ಷರು ಬಿಜೆಪಿ ದ.ಕ, ಚಂದ್ರಶೇಖರ್ ಪಾಲ್ತಾಡಿ ಸಂಪಾದಕರು ಕರ್ನಾಟಕ ಮಲ್ಲ ಮುಂಬೈ, ಜಯಾನಂದ ತಾಲೂಕು ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ, ಜಯಾನಂದ ಆಚಾರ್ಯ ಕಲ್ಲಡ್ಕ, ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶಿವು ಉಳ್ಳಾಲ್ತಿ ಅಮ್ಮನವರು ಹಾಗೂ ಅಜ್ವರ ದೈವಂಗಳ ಕ್ಷೇತ್ರ ಕಾoಪ್ರಬೈಲು, ಕೆ ಸಂಜೀವ ಪೂಜಾರಿ ಮಾಜಿ ಸದಸ್ಯರು ತಾಲೂಕ ಪಂಚಾಯತ ಬಂಟ್ವಾಳ, ಸತೀಶ್ ಕುಂಪಲ ಉಪಾಧ್ಯಕ್ಷರು ಬಿಜೆಪಿ ದ ಕ ಜಿಲ್ಲೆ, ಶಂಕರ ಯಾನೆ ಕೋಚ ಪೂಜಾರಿ ನಾಲ್ಕೈ ತಾಯ ದೈವಸ್ಥಾನ ಸಜೀಪನಡು, ಸತ್ಯಾನಂದ ಪೂಜಾರಿ ಸಾನದ ಮನೆ, ಸದಾಶಿವ ತಲೆಮೊಗರು ಮಾಲಕರು ಸ್ವಾತಿ ಇಂಜಿನಿಯರಿಂಗ್ ವರ್ಕ್ಸ್ ಮಂಗಳೂರು, ಜಿತೆಂದ್ರ ಶೆಟ್ಟಿ ತಲಪಾಡಿ ಗುತ್ತು ಕೋಶಾಧಿಕಾರಿ ಬಿಜೆಪಿ ಮಂಡಲ ಮಂಗಳೂರು, ಬಿ ರಘು ಸಪಲ್ಯ ಮಾಲಕರು ಜ್ಯೋತಿ ಬೀಡಿಗಳು, ಪಾಣೆಮಂಗಳೂರು, ಮಮತಾ ಡಿ ಎಸ್ ಗಟ್ಟಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಾನಿಗಳನ್ನು ಗೌರವಿಸಲಾಯಿತು. ಕೆ ರಾಧಾಕೃಷ್ಣ ಆಳ್ವ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಪಕ್ಕಳ ಹಾಗೂ ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ದೇರಾಜೆ ಧನ್ಯವಾದವಿತ್ತರು.