ತ್ರಿಪಾತ್ರ ನಿರ್ವಹಿಸುತ್ತಿರುವ ಗೃಹ ಸಚಿವರ ವಜಾಕ್ಕೆ ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಆಗ್ರಹ…

ಬೆಂಗಳೂರು: ರಾಜ್ಯದಲ್ಲಿ ಅಸಮರ್ಥ ಗೃಹ ಸಚಿವರು ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಸಚಿವರು ಪೊಲೀಸ್ ಹಾಗು ಭಜರಂಗದಳದ ಪಾತ್ರವನ್ನು ಏಕಕಾಲದಲ್ಲಿ ನಿಭಾಯಿಸುತ್ತಿರುವಂತೆ ಭಾಸವಾಗುತ್ತಿದೆ. ಆರಗ ಜ್ಞಾನೇಂದ್ರ ಅವರು ರಾಜ್ಯದ ಪೊಲೀಸ್ ಇಲಾಖೆಗೆ ಕಳಂಕ ತಂದಿದ್ದು, ತಕ್ಷಣ ಅವರನ್ನು ಸಚಿವ ಸ್ಥಾನದಿಂದ ವಜಾಮಾಡಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಅವರು ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡುವವರು ಮುಖ್ಯಮಂತ್ರಿಗಳಾ ? ಬಿಜೆಪಿ ಅಧ್ಯಕ್ಷರಾ ? ಅಥವ ನಾಡಿನ ಜನರಾ ? ಎಂದು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಪ್ರಶ್ನಿಸಿದ್ದಾರೆ.
ಇಷ್ಟೊಂದು ಎಡವಟ್ಟು ಮಾಡುತ್ತಿರುವ ಗೃಹ ಸಚಿವರು ರಾಜ್ಯಕ್ಕೆ ಅವಮಾನ. ಕೊಲೆಯನ್ನು ಕೂಡ ಕೋಮುವಾದಕ್ಕೆ ಉಪಯೋಗಿಸುವ ಸಚಿವರ ಮನಸ್ಥಿತಿ ನೋಡಿ ರಾಜ್ಯದ ಜನತೆಗೆ ಗೊಂದಲಕ್ಕೆ ಸಿಲುಕಿದ್ದಾರೆ. ಯಾರನ್ನೇ ಕೊಲೆ ಮಾಡಿದರೂ ಅದು ಖಂಡನಾರ್ಹ. ಎಲ್ಲರೂ ಒಗ್ಗಟ್ಟಿನಿಂದ ಖಂಡಿಸಬೇಕಾದ ಇಂತಹ ಸಂದರ್ಭದಲ್ಲಿ ಸಿ ಟಿ ರವಿ ಹಾಗೂ ಆರಗ ಜ್ಞಾನೇಂದ್ರ ಅವರ ನಡವಳಿಕೆ ಅವರಲ್ಲಿರುವ ಸಂಕುಚಿತ ಮನೋಭಾವನೆಯನ್ನು ತೋರಿಸುತ್ತದೆ ಎಂದ ಟಿ ಎಂ ಶಾಹೀದ್ ತೆಕ್ಕಿಲ್ ರಾಜ್ಯದಲ್ಲಿ ಹಿಜಾಬ್, ಹಲಾಲ್, ಅಜಾನ್, ಹಣ್ಣು , ತರಕಾರಿ ಹಾಗು ವ್ಯಾಪಾರಕ್ಕೂ ಕೋಮು ವಿಷ ಬೀಜ ಬಿತ್ತಿ ಮುಸಲ್ಮಾನರ ಮೇಲೆ ದಾಳಿ ಮಾಡುತ್ತಿರುವ ಸಂಘ ಪರಿವಾರದ ಬಗ್ಗೆ ತುಟಿ ಪಿಕ್ ಎನ್ನದ ರಾಜ್ಯ ಸರಕಾರ ರಾಜ್ಯಕ್ಕೆ ಮಾರಕ ಎಂದೂ ಅವರು ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮುಂದೆ ನೀರು ,ಗಾಳಿ, ಬೆಳಕಿಗೆ, ರಕ್ತಕ್ಕೂ ಕೋಮುವಾದ ತರಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು ಇಂತಹ ಅತ್ಯಂತ ದುರ್ಬಲ ಮುಖ್ಯಮಂತ್ರಿಗಳನ್ನ ಹಾಗು ಸರಕಾರವನ್ನ ನನ್ನ ರಾಜಕೀಯ ಜೀವನದಲ್ಲಿ ಹಿಂದೆಂದೂ ಕಂಡಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಕೋಮುವಾದವನ್ನು ಪರೋಕ್ಷವಾಗಿ ಬಿತ್ತರಿಸುತ್ತಿರುವ ಸಂಘ ಪರಿವಾರದ ಸಂಘಟನೆಗಳು ಮತ್ತು ಎಸ್ ಡಿ ಪಿ ಐ ಈಗ ಕರ್ನಾಟಕದಲ್ಲಿ ಆಗಿರುವ ಕೋಮು ಧ್ರುವೀಕರಣಕ್ಕೆ ಮುಖ್ಯ ಕಾರಣ. ಜಾತ್ಯತೀತ ತತ್ವ ನೆಲೆಯೂರಿದ್ದ ಕರ್ನಾಟಕದಲ್ಲಿ ಇಂದೆಂದು ಕಂಡರಿಯದ ರೀತಿಯಲ್ಲಿ ಕೋಮು ದ್ರುವೀಕರಣವಾಗತಿದ್ದು ರಾಜ್ಯದ ಅಭಿವೃದ್ಧಿಗೆ ಇದು ಮಾರಕವಾಗಿದೆ. ರಾಜ್ಯದ ಜನತೆ ಮುಸ್ಲಿಂ ಕೋಮುವಾದಿಗಳನ್ನು ಹಾಗು ಹಿಂದೂ ಕೋಮುವಾದಿಗಳನ್ನು ಹತೋಟಿ ಮಾಡದಿದ್ದಲ್ಲಿ ರಾಜ್ಯ ಐವತ್ತು ವರ್ಷ ಹಿಂದಕ್ಕೆ ಹೋಗುವುದಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ರಾಜ್ಯದ ಯುವಜನಾಂಗ ಗಂಭೀರವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಅಭಿವೃಧ್ದಿ ಕೆಲಸ ಮಾಡುವುದರಲ್ಲಿ ವಿಫಲರಾದ ಬಿಜೆಪಿ ಸರಕಾರ, ಸಂಘ ಪರಿವಾರದ ಮುಖಾಂತರ ಜನರ ಭಾವನೆಗಳನ್ನು ಕೆರಳಿಸಿ ಮತ ಪಡೆದು ಪುನ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ತಯಾರಿಯಲ್ಲಿದ್ದಾರೆ. ಜನ ಬೆಲೆ ಏರಿಕೆಯಿಂದ ಹಾಗೂ ನಿರುದ್ಯೋಗದಿಂದ ಸರ್ಕಾರದ ವಿರುದ್ಧ ತಿರುಗಿ ಬೀಳುವ ಮುನ್ಸೂಚನೆಯನ್ನು ಅರಿತು ಸಂಘಪರಿವಾರದ ಸೂಚನೆಯಂತೆ ಈ ಬೆಳವಣಿಗೆಗಳು ನಡೆಯುತ್ತಿದ್ದು ಇದಕ್ಕೆ ಮುಸ್ಲಿಂ ಕೋಮುವಾದಿಗಳು ಸಾಥ್ ಕೊಡುತಿದ್ದಾರೆ. ಇದು ಸಾವಿರಾರು ಕೋಟಿಯ ಕೊಡು ಕೊಳ್ಳುವ ವ್ಯವಹಾರ ಎಂದು ಟಿ ಎಂ ಶಾಹೀದ್ ತೆಕ್ಕಿಲ್ ಆರೋಪಿಸಿದರು. ಸಂಘ ಪರಿವಾರದವರು ಮುಸ್ಲಿಮ್ ಸಮುದಾಯದ ಬಗ್ಗೆ ಹೆಚ್ಚು ತಲೆಕೆಡಿಸಿಕಂಡಿದ್ದಾರೆ. ಸಮಾಜದಲ್ಲಿ ಇರುವ ಬಡವರ, ಅನಾರೋಗ್ಯ ಪೀಡಿತರ, ನಿರ್ಗತಿಕರ,ಮನೆಯಿಲ್ಲದವರ, ನಿರುದ್ಯೋಗಿಗಳ, ರೈತರ ಬಗ್ಗೆ ಯೋಚಿಸಲು, ಸರಕಾರದ ಮೇಲೆ ಒತ್ತಡ ಹಾಕಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಟಿ ಎಂ ಶಾಹೀದ್ ತೆಕ್ಕಿಲ್ ಬಹುತೇಕ ದೃಶ್ಯ ಮಾಧ್ಯಮಗಳು ಸಮಾಜದಲ್ಲಿ ಎರಡು ಸಮುದಾಯವನ್ನು ಬೇರ್ಪಡಿಸುವ ನಿಟ್ಟಿನಲ್ಲಿ ಚರ್ಚೆಗಳನ್ನು ಮಾಡುತ್ತಿದ್ದು ಇಂತಹ ಚರ್ಚೆಗಳಿಂದ ಮುಸ್ಲಿಂ ಪರವಾಗಿ ಸಮರ್ಥವಾಗಿ ವಾದ ಮಂಡಿಸಲ ವಿಫಲರಾಗಿ ಸಂಘ ಪರಿವಾರದ ಕಾರ್ಯಕ್ಕೇ ಪರೋಕ್ಷ ಬೆಂಬಲ ನೀಡಿದಂತಾಗುತ್ತದೆ. ಇಂತಹ ಚರ್ಚೆಗಳಲ್ಲಿ ಭಾಗವಹಿಸದೇ ಇರುವುದು ಸೂಕ್ತ. ಬೆಲೆ ಏರಿಕೆ, ನಿರುದ್ಯೋಗದ ಮತ್ತು ರಾಜ್ಯದ ದೇಶದ ಅಭಿವೃದ್ಧಿ ಬಗ್ಗೆ ಚರ್ಚೆಗಳು ನಡೆಯುತ್ತಿಲ್ಲ ಎಂದು ಕೆಲವು ದೃಶ್ಯ ಮಾಧ್ಯಮಗಳ ಬಗ್ಗೆ ಶಾಹೀದ್ ಖೇದ ವ್ಯಕ್ತಪಡಿಸಿದ್ದಾರೆ.

Sponsors

Related Articles

Back to top button