ಮಂಚಿ – ಅ.22 ರಂದು ಕನಕ ಸಭಾ ಮಂಟಪ ಲೋಕಾರ್ಪಣೆ…

ಬಂಟ್ವಾಳ: ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಶ್ರೀ ಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿ ಕನಕಗಿರಿ ಕೊಳ್ನಾಡು ಮಂಚಿ ಇಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕನಕ ಸಭಾ ಮಂಟಪ ಮತ್ತು ಪಾಕ ಶಾಲೆಯ ಉದ್ಘಾಟನೆಗೆ ಸಜ್ಜುಗೊಂಡಿದೆ ಅ. 22 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ವಿಶ್ವಸ್ಥ ಮಂಡಳಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ಟರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 42 ವರ್ಷಗಳಿಂದ ಹಿಂದು ಸಮಾಜ ಸಂಘಟನೆ ಮತ್ತು ಜಾಗೃತಿಗಾಗಿ ವಿಶ್ವಸ್ಥ ಮಂಡಳಿಯು ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಕನಕಗಿರಿಯಲ್ಲಿ ಭಜನಾ ಮಂದಿರ ಹಾಗೂ ಗೋ ಶಾಲೆ ಕಾರ್ಯನಿರ್ವಹಿಸುತ್ತಿದೆ.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸಭಾ ಮಂಟಪವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ದೀಪೋಜ್ವಲನ ಮಾಡಿ ಉದ್ಘಾಟನೆ ಮಾಡಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪ್ಪಾಡಿಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ವಿವಿಧ ಭಜನಾ ಮಂಡಳಿಯವರಿಂದ ಅರ್ಧ ಏಕಾಹ ಭಜನೆ , ಮಹಾ ಗಣಪತಿ ಹವನ , ದುರ್ಗಾನಮಸ್ಕಾರ ಪೂಜೆ, ಭಜನಾ ಮಂಗಳೋತ್ಸವ , ವಸುಧಾರಾ ಸಾಂಸ್ಕøತಿಕ ಕಲಾ ಸಂಘ ಬೋಳಂತೂರು ಇವರಿಂದ ನೃತ್ಯ ವೈಭವ ನಡೆಯಲಿದೆ.ರಾತ್ರಿ 8.30 ಕ್ಕೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಕಾ ಗೋಷ್ಠಿಯಲ್ಲಿ ಸಿ ಎಚ್ ಸೀತಾರಾಮ ಶೆಟ್ಟಿ, ರಾಮಕೃಷ್ಣ ನಾಯಕ್ ಕೋಕಳ, ಅ.ನಾ. ಕೃಷ್ಣಶರ್ಮ , ನ್ಯಾಯವಾದಿ ರವೀಂದ್ರ ಕುಕ್ಕಾಜೆ ಉಪಸ್ಥಿತರಿದ್ದರು.

Sponsors

Related Articles

Back to top button