ಲಯನ್ಸ್ ಕ್ಲಬ್ ಮಾಣಿ – ಪದಗ್ರಹಣ ಸಮಾರಂಭ …

ಬಂಟ್ವಾಳ: ಲಯನ್ಸ್ ಕ್ಲಬ್ ಮಾಣಿಯ 2023– 24 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪದ್ಮಮಾಲ್ ಸಭಾಂಗಣದಲ್ಲಿ ಜುಲೈ 18 ರಂದು ನಡೆಯಿತು.
ಪದಗ್ರಹಣ ಅಧಿಕಾರಿಯಾದ ಲಯನ್ಸ್ ಜಿಲ್ಲಾ ಉಪರಾಜ್ಯಪಾಲರಾದ ಕುಡುಪಿ ಅರವಿಂದ್ ಶೆಣೈ ನೂತನ ಪದಾಧಿಕಾರಿಗಳ ಪದಗ್ರಹಣ ನೇರವೇರಿಸಿದರು.ನಿಕಟಪೂವ೯ ಅಧ್ಯಕ್ಷರಾದ ಲಯನ್ ಉಮೇಶ್ ಪಿ ಯವರು ನೂತನ ಅಧ್ಯಕ್ಷರಾದ ಲಯನ್ ಕೂಸಪ್ಪ ಪೂಜಾರಿ ಯವರಿಗೇ ಅಧಿಕಾರ ಹಸ್ತಂತರಿಸಿದರು,ಅಧಿಕಾರ ಸ್ವೀಕರಿಸಿ ಕ್ಲಬ್ ವತಿಯಿಂದ ಸೇವಾ ಕಾಯ೯ಕ್ರಮಗಳಿಗೆ ಚಾಲನೆ ನೀಡಿದರು,ಅಪಘಾತದಿಂದ ಚಿಕಿತ್ಸೆ ಪಡೆಯುವ ಪ್ರವೀಣ್ ಪೂಜಾರಿಯವರಿಗೆ ಧನ ಸಹಾಯ, 10 ತರಗತಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ 5 ವಿದ್ಯಾಥಿ೯ ಗಳನ್ನು ಅಥಿ೯ಕ ನೆರವಿನೊಂದಿಗೆ ಗೌರವಿಸಲಾಯಿತು,ಮತ್ತು ಪದವಿಪೂವ೯ ವಿಜ್ಞಾನ ವಿಭಾಗ ದಲ್ಲಿ ಅತ್ಯಧಿಕ ಅಂಕ ಗಳಿಸಿದ ಕುಮಾರಿ ಜಾಹ್ನವಿ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು,ಕ್ಲಬ್ ನ ಪೂವ೯ಅಧ್ಯಕ್ಷರುಗಳಾದ ಲಯನ್ ಗಂಗಾಧರ ರೈ, ಬಾಲಕೃಷ್ಣ ಶೆಟ್ಟಿ, ಡಾ! ಶ್ರೀನಾಥ್ ಅಳ್ವಾರವರನ್ನು ಸನ್ಮಾನಿಸಲಾಯಿತು, ಲಯನ್ ಎಂ.ಜೆ.ಎಪ್ ಪಡೆದ ಪ್ರಹ್ಲಾದ ಶೆಟ್ಟಿ ಯವರನ್ನು ಗೌರವಿಸಲಾಯಿತು ನಿಕಟ ಪೂವ೯ ಅಧ್ಯಕ್ಷ ರಾದ ಉಮೇಶ್ ಪಿ, ಕಾಯ೯ದಶಿ೯ ರವಿಕಿರಣ್,ಕೋಶಾಧಿಕಾರಿ ಕೂಸಪ್ಪ ಪೂಜಾರಿ ಯವರನ್ನು ಗೌರವಿಸಲಾಯಿತು, ಶುಭಹಾರೈಕೆ ಸಮಯದಲ್ಲಿ ನಿಕಟ ಪೂವ೯ MCC ವಸಂತ್ ಕುಮಾರ್ ಶೆಟ್ಟಿ, ಪ್ರಾಂತ್ಯ6 ರರ ಪ್ರಾಃತ್ಯಧ್ಯಕ್ಷ ಲೆನ್ಸಿ ಮಸ್ಕರೇನಿಯಸ್,ವಲಯ ಅಧ್ಯಕ್ಷರಾದ ವಿನ್ನಿ ಮಸ್ಕರೇನಿಯಸ್,ವಲಯ ಸಂಯೋಜಕರಾದ ಡಾ! ಶ್ರೀನಾಥ್ ಅಳ್ವಾರವರು ಶುಭ ಹಾರೈಸಿದರು,
ಮಾಸ್ಟರ್ ಶ್ರೀನಿಧಿ ಪ್ರಾಥ೯ನೆ ಮಾಡಿದರು ಗಣೇಶ್ ಪೂಜಾರಿ ಧ್ವಜವಂದನೆ ಗೈದರು,ಉಮೇಶ್ ಪಿ ಬರಿಮಾರು ಸ್ವಾಗತಿಸಿದರು ನೂತನ ಕಾಯ೯ದಶಿ೯ ವಿನ್ಸೆಂಟ್ ಲಸ್ರಾದೋ ಧನ್ಯವಾದ ಸಮಪಿ೯ಸಿದರು,ಲಯನ್ ಬಾಲಕೃಷ್ಣ ಅಳ್ವಾರವರು ಕಾಯ೯ಕ್ರಮ ನಿರೂಪಿಸಿದರು

Sponsors

Related Articles

Back to top button